ಕೋಲ್ಕತಾ: ಲೇಖಕಿ, ಸಾಮಾಜಿಕ ಕಾರ್ಯಕರ್ತೆ, ಜ್ಞಾನಪೀಠ ಪ್ರಶಸ್ತಿ ವಿಜೇತೆ ಹಾಗೂ ಮೆಗ್ಸೆಸೆ ಪ್ರಶಸ್ತಿ ವಿಜೇತೆ ಮಹಾಶ್ವೇತಾ ದೇವಿ ಅವರ ಸ್ಮಾರಕವನ್ನು ಅವರ ‘ರಾಜದಂಗ’ ನಿವಾಸದಲ್ಲಿ ಸ್ಥಾಪಿಸಲಾಗುವುದು ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸ್ಮಾರಕದಲ್ಲಿ ಅವರಿಗೆ ಸಂಬಂಧಪಟ್ಟ ಸ್ವತ್ತುಗಳು, ಪುಸ್ತಕಗಳು, ಬಳಸಿದ ವಸ್ತುಗಳನ್ನು ಇರಿಸಲಾಗುವುದು ಎಂದು ಬ್ಯಾನರ್ಜಿ ಹೇಳಿದ್ದಾರೆ.
ತಮ್ಮ ಜೀವನಪರ್ಯಂತ ಬಡವರು, ಬುಡಕಟ್ಟು ಜನಾಂಗದವರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಹಾಶ್ವೇತಾ ದೇವಿ ಅವರು ಜುಲೈ 28, 2016ರಂದು ನಿಧನರಾಗಿದ್ದರು.
ಮುಂದಿನ ದಿನಗಳಲ್ಲಿ ಪ್ರಸಿದ್ಧ ಪತ್ರಕರ್ತರಾದ ಬರುನ್ ಸೇನ್ಗುಪ್ತಾ, ಗೌರ್ ಕಿಶೋರ್ ಘೋಷ್ ಹಾಗೂ ಅಮಿತಾಭ ಚೌಶರಿ ಹೆಸರಲ್ಲೂ ಸ್ಮಾರಕ ಸ್ಥಾಪಿಸುವ ಯೋಜನೆ ಇದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.