ಮೂಡುಬಿದಿರೆ: ಕೇರಳದ ಚೆಂಗನಚೇರಿಯಲ್ಲಿ ಕೇರಳ ಬಾಲ್ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಫೆಡರೇಶನ್ ಕಪ್ ಅಖಿಲ ಭಾರತ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಮಹಿಳಾ ವಿಭಾಗದಲ್ಲಿ ಕನಾಟಕ ಮಹಿಆ ತಂಡವು ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಕರ್ನಾಟಕದ ವನಿತೆಯರು ತಮಿಳುನಾಡು ತಂಡವನ್ನು 37-35, 35-25 ರಿಂದ ಸೋಲಿಸಿದರು.
ಇದಕ್ಕೆ ಮೊದಲು ನಡೆದ ಸೂಪರ್ ಲೀಗ್ ಹಂತದ ಪಂದ್ಯಗಳಲ್ಲಿ ಕರ್ನಾಟಕದ ಆಟಗಾರ್ತಿಯರು ಅತಿಥೇಯ ಕೇರಳ ತಂಡವನ್ನು 35-28, 35-25 ರಿಂದ ಸೋಲಿಸಿದರೆ, ಛತ್ತೀಸ್ಗಡ ತಂಡವನ್ನು 35-20, 35-26 ರಿಂದ ಮಣಿಸಿದರು.
ವಿಜಯೀ ತಂಡ ಇಲ್ಲಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿಯೇ ತರಬೇತಿ ನಡೆಸಿತ್ತು. ಈ ತಂಡದಲ್ಲಿ ಆಳ್ವಾಸ್ನ ಎಂಟು ಮಂದಿ ಆಟಗಾರ್ತಿಯರಿದ್ದಾರೆ. ಇದೇ ತಂಡ ಈಚೆಗಷ್ಟೇ 62ನೇ ರಾಷ್ಟ್ರೀಯ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿಯೂ ಪ್ರಶಸ್ತಿ ಗೆದ್ದಿತ್ತು.
ಕರ್ನಾಟಕ ತಂಡ 2015 ರಲ್ಲಿ ನೆಲ್ಲೂರಿನಲ್ಲಿ, 2016 ರಲ್ಲಿ ಮಚಲಿಪಟ್ಟಣದಲ್ಲಿ ಫೆಡರೇಶನ್ ಕಪ್ ಟೂರ್ನಿ ನಡೆದಿದ್ದಾಗಲೂ ಪ್ರಶಸ್ತಿ ಗೆದ್ದಿತ್ತು. ಇದೀಗ ಇಲ್ಲಿಯೂ ಗೆದ್ದು ಹ್ಯಾಟ್ರಿಕ್ ಸಾಧಿಸಿದೆ. ಈ ಟೂರ್ನಿಯಲ್ಲಿ ಹ್ಯಾಟ್ರಿಕ್ ಕಿರೀಟ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನೂ ಪಡೆದಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.