ರಾಯ್ಪುರ್: ದೇಶಾದ್ಯಂತ ನಕ್ಸಲರ ಹಾವಳಿ ಹೆಚ್ಚುತ್ತಿದ್ದು, ನಕ್ಸಲರು ಅಡಗಿ ಕುಳಿತುಕೊಳ್ಳುವ ಬದಲು ಎದುರು ಬಂದು ಮುಕ್ತವಾಗಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ಇದರಿಂದ ನಾವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.
ನಕ್ಸರಲು ನಿಜಕ್ಕೂ ಬಡತನದ ವಿರುದ್ದ ಹೋರಾಡುತ್ತಿದ್ದರೆ ನಾವು ಅವರಿಗೆ ಎಲ್ಲ ಪರಿಸ್ಥಿತಿಗಳಲ್ಲೂ ಸಹಾಯ ಮಾಡಲು ಸಿದ್ಧರಿದ್ದೇವೆ. ಅವರು ತಮ್ಮ ಬುಲೆಟ್ಗಳನ್ನು ಬದಿಗಿಟ್ಟು ವೇದಿಕೆಗೆ ಆಗಮಿಸಿದಲ್ಲಿ ಮಾತ್ರ ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.
‘ಸಂತೋಷ ಸಮೀಕ್ಷೆ’ (ಹ್ಯಾಪಿನೆಸ್ ಸರ್ವೇ) ಕುರಿತು ಮಾತನಾಡಿದ ಅವರು, ತಾನು ಸದ್ಯದಲ್ಲೇ ‘ಹ್ಯಾಪಿನೆಸ್ ಸರ್ವೇ’ ಪ್ರಾರಂಭಿಸಲಿದ್ದು, ಇದು ಪ್ರತಿ ಮಕ್ಕಳು ಮತ್ತು ಯುವಕರ ಜೀವನಕ್ಕೆ ಸಹಾಯಕವಾಗಲಿದೆ. ಇದಕ್ಕೆ ಈಗಾಗಲೇ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ದೊರೆತಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.