ಸುಳ್ಯ : ಭಾರತದ ಸಂಸ್ಕೃತಿ ಅತ್ಯಪೂರ್ವವಾದುದು. ಇಲ್ಲಿ ಶ್ರೀಸಾಮಾನ್ಯನು ತನ್ನ ಬದುಕಿನ ನೆಲಗಟ್ಟನ್ನು ತನ್ನ ವಚನದ ಮೂಲಕ ವ್ಯಕ್ತಪಡಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ. ಅಜ್ಞಾತ ಕವಿಗಳಿಂದ ರಚನೆಯಾದ ಸಾಹಿತ್ಯವೇ ಜಾನಪದ. ಜನಪದರು ಜೀವನದ ಅನುಭವವನ್ನು ಪದಗಳ ಮೂಲಕ ಚೆಲ್ಲಿ ಬಳಿಕ ನೃತ್ಯ ಮತ್ತು ಹಾಡುಗಳ ಮೂಲಕ ಪ್ರಕಟಿಸಿದರು. ಜನಪದರು ಎದ್ದ ತಕ್ಷಣ ಭೂಮಿಯನ್ನು ನೆನೆದರೆ ಪ್ರಸ್ತುತ ಜನರು ವಾಟ್ಸಾಪ್ನಲ್ಲಿ ಮುಳುಗಿರುವುದು ವಿಷಾದನೀಯ, ಜನರಲ್ಲಿ ಕಾಣುವ ತವರಿನ ಮಮತೆ, ದೇವರ ಸ್ತುತಿ, ಸತ್ಯ, ವೈಚಾರಿಕ ಮೌಲ್ಯ ಇಂದು ನಶಿಸುತ್ತಿದೆ. ಹಾಗಾಗಿ ಜನಪದ ಸಾಹಿತ್ಯಕ್ಕೆ ಮನ್ನಣೆ ನೀಡುವುದರ ಮೂಲಕ ನಮ್ಮ ದೇಶೀ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು ಎಂದು ಶ್ರೀ ದೇವಿಪ್ರಸಾದ್ ಜಿ.ಸಿ. ಇವರು ಹೇಳಿದರು.
ಅವರು ದಿನಾಂಕ 27-02-2017 ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಯೋಜಕತ್ವದಲ್ಲಿ ನಡೆದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಜಾನಪದ ಸಾಹಿತ್ಯ ಮತ್ತು ದೇಶೀ ಚಿಂತನೆಗಳು ವಿಷಯದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ ಇಂದಿನ ಶಾಸ್ತ್ರೀಯ ಸಂಗೀತ, ನಾಟ್ಯಗಳಿಗೆ ಜನಪದವೇ ಮೂಲ ಎಂದರು. ಕಾರ್ಯಕ್ರಮದ ಮೊದಲಿಗೆ ವಿದ್ಯಾರ್ಥಿನಿಯರಾದ ಶ್ರದ್ಧಾ ಡಿ.ಕೆ, ಲಾವಣ್ಯ ಜೆ.ಡಿ, ಅನಘಾ ಆರ್.ಯು ಪ್ರಾರ್ಥಿಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ, ಶಿಕ್ಷಕಿ ಸವಿತ ಎಂ ವಂದಿಸಿದರು. ಶಿಕ್ಷಕ ರಘುರಾಮ ಭಟ್ ಸಿ. ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಜಾನಪದ ವೈವಿಧ್ಯದಲ್ಲಿ ವಿವಿಧ ಜಾನಪದ ಹಾಡುಗಳು, ನೃತ್ಯ, ಕೋಲಾಟ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.