ವಾಷಿಂಗ್ಟನ್ : ನಾಸಾ ವಿಜ್ಞಾನಿಗಳು ಮಹತ್ವದ ಸಂಶೋಧನೆಯನ್ನು ಮಾಡಿದ್ದು, ಸೌರವ್ಯೂಹದ ಸಮೀಪದಲ್ಲೇ ಭೂಮಿಯನ್ನು ಹೋಲುವ 7 ಗ್ರಹಗಳನ್ನು ಪತ್ತೆ ಮಾಡಲಾಗಿದೆ.
ನಾಸಾ ವಿಜ್ಞಾನಿಗಳ ಮಹತ್ವದ ಸಂಶೋಧನೆಗೆ ಶ್ಲಾಘನೆ ವ್ಯಕ್ತಪಡಿಸಿರುವ ಗೂಗಲ್, ಡೂಡಲ್ ಬಿಡಿಸುವ ಮೂಲಕ ಅಭಿನಂದನೆಯನ್ನು ಸಲ್ಲಿಸಿದೆ. ಈ ಕುರಿತು ಟ್ವೀಟ್ ಕೂಡ ಮಾಡಲಾಗಿದೆ.
Earth to #TRAPPIST1…we read you loud and clear. Thanks @NASA for this cosmic discovery! #GoogleDoodle pic.twitter.com/EDh6sDjKIQ
— Google Doodles (@GoogleDoodles) February 23, 2017
ನಮ್ಮ ಸೌರವ್ಯೂಹದಿಂದ ಸುಮಾರು 39 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿ ಭೂಮಿಯನ್ನು ಹೋಲುವ 7 ಗ್ರಹಗಳನ್ನು ಪತ್ತೆ ಮಾಡಲಾಗಿದೆ ಎಂದು ಬುಧವಾರ ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
These 7 Earth-sized planets were seen by @NASASpitzer around a nearby, ultra-cool dwarf star called TRAPPIST-1: https://t.co/G9tW3cJMnV pic.twitter.com/Z6gvaH96Tz
— NASA (@NASA) February 22, 2017
TRAPPIST-1 ನಕ್ಷತ್ರ ಸಂಶೋಧನೆ ಮಾಡುವ ಸಮಯದಲ್ಲಿ ಪತ್ತೆಯಾಗಿರುವ 7 ಗ್ರಹಗಳು ಭೂಮಿಯನ್ನೇ ಬಹಳಷ್ಟು ಹೋಲುತ್ತಿದ್ದು, ಅವುಗಳ ಪೈಕಿ 3 ಗ್ರಹಗಳು ಭೂಮಿಯಂತೆ ತಮ್ಮ ಸುತ್ತ ತಿರುಗುತ್ತಿವೆ. ಈ 3 ಗ್ರಹಗಳಲ್ಲಿ ನೀರಿನ ಸೆಲೆಯೂ ಇರಬಹುದೆಂದು ವಿಜ್ಞಾನಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಪತ್ತೆಯಾಗಿರುವ ನೂತನ ಸೌರವ್ಯೂಹದ ಕುರಿತು ಇನ್ನಷ್ಟು ಸಂಶೋಧನೆಗಳನ್ನು ನಾಸಾ ವಿಜ್ಞಾನಿಗಳು ಮುಂದುವರೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.