×
Home About Us Advertise With s Contact Us

ಕಾಂಗ್ರೆಸ್ ಮತ್ತೆ ಮೇಲೇಳುವುದಿಲ್ಲ: ಭಾರಧ್ವಜ್

bhardwajನವದೆಹಲಿ: ತನ್ನ ಪಕ್ಷದ ವಿರುದ್ಧವೇ ಹರಿಹಾಯ್ದಿರುವ ಹಂಸರಾಜ್ ಭಾರಧ್ವಜ್, ಇನ್ನು ಕಾಂಗ್ರೆಸ್ ಮೇಲೇಳುವುದಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿರುವ ಅವರು ‘ಜನ ಇನ್ನು ಕೇಳಲು ತಯಾರಿಲ್ಲ. ಕಾಂಗ್ರೆಸ್ ಮತ್ತೆ ಮೇಲೇಳುವುದಿಲ್ಲ, ಇದಕ್ಕೆ ಕಾಂಗ್ರೆಸ್ಸೇ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಇದಕ್ಕಾಗಿ ನಾನು ಬಿಚಾರಿ (ಅಸಾಹಯಕ ಸೋನಿಯಾ ಗಾಂಧಿ)ರನ್ನು ದೂಷಿಸುವುದಿಲ್ಲ. ಪ್ರಿಯಾಂಕ ಗಾಂಧೀಯನ್ನು ಪಕ್ಷಕ್ಕೆ ಕರೆತರದೇ ಇರುವುದು ಕೂಡ ಜನ ಅಸಂತುಷ್ಟರಾಗಿರುವುದಕ್ಕೆ ಕಾರಣ ಎಂದಿದ್ದಾರೆ.

ಕೋಮುವಾದಿ ಅಥವಾ ಜಾತ್ಯಾತೀತವಾಗಿರುವುದು ಇಲ್ಲಿ ಮುಖ್ಯವಲ್ಲ. ಪಕ್ಷವನ್ನು ಮೇಲೆತ್ತಲು ಶ್ರಮಪಡುವುದು ಮುಖ್ಯ. ಕೇವಲ ಮೂರು ನಾಲ್ಕು ನಾಯಕರುಗಳಷ್ಟೇ ಕಾಂಗ್ರೆಸ್ ಪಕ್ಷದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಹಿರಿಯರ ಮಾತನ್ನು ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಬಿಟ್ಟುಬಿಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರಧ್ವಜ್ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಹಲವರು ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

 

Recent News

Back To Top
error: Content is protected !!