ಬೆಂಗಳೂರು: ಐಪಿಎಲ್ 2017ರ ಆಟಗಾರರ ಹರಾಜು ಈಗಾಗಲೇ ಆರಂಭಗೊಂಡಿದ್ದು, 356 ಆಟಗಾರರು ಹರಾಜಿಗೆ ಒಡ್ಡಿಕೊಂಡಿದ್ದಾರೆ. ಭಾರತದ ಹೆಚ್ಚಿನ ಆಟಗಾರರು ಈ ಪಟ್ಟಿಯಲ್ಲಿ ಹೆಚ್ಚಿನ ಬೆಲೆಗೆ ಹರಾಜಾಗುವ ಸಾಧ್ಯತೆಗಳು ಕಡಿಮೆ ಇದ್ದರೂ ವೇಗದ ಬೌಲರ್ ಇರ್ಫಾನ್ ಪಠಾಣ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ವಿದೇಶಿ ಆಟಗಾರರರಲ್ಲಿ ಬೆನ್ ಸ್ಟೋಕ್ಸ್ ಮೇಲೆ ಎಲ್ಲರ ಗಮನವಿದ್ದು, 14.5 ಕೋಟಿ ರೂ.ಗೆ ರೈಸಿಂಗ್ ಪುಣೆ ತಂಡದ ಪಾಲಾಗಿದ್ದಾರೆ. ಇದು ಹರಾಜು ಆರಂಭಗೊಂಡ ನಂತರದ ಅತಿ ಹೆಚ್ಚಿನ ಮೊತ್ತದ ಹರಾಜು ಆಗಿದೆ.
ಇನ್ನು ಇತರ ಆಟಗಾರರಾದ ಬೆನ್ ಸ್ಟೋಕ್ಸ್, ಪ್ಯಾಟ್ರಿಕ್ ಕಮಿನ್ಸ್, ಇಯಾನ್ ಮಾರ್ಗನ್, ಮಿಚೆಲ್ ಜಾನ್ಸನ್, ಏಜೆಲೋ ಮ್ಯಾಥ್ಯೂಸ್, ಕಗಿಸೋ ರಬಾಡಾ, ಮಿಚೆಲ್ ಸ್ಯಾಂಟ್ನರ್ ಹಾಗೂ ಇಮ್ರಾನ್ ತಾಹಿರ್ ದುಬಾರಿ ಆಟಗಾರರ ಪಟ್ಟಿಗೆ ಪರಿಗಣಿಸಲಾಗಿದೆ.
ಮಿಚೆಲ್ ಜಾನ್ಸನ್ ಮೂಲ ಬೆಲೆ 2 ಕೋಟಿಗೆ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಹರಾಜಾಗಿದ್ದಾರೆ.
ಪ್ಯಾಟ್ರಿಕ್ ಕಮಿನ್ಸ್ (ಮೂಲ ಬೆಲೆ 2 ಕೋಟಿ) ಅವರು 4.5 ಕೋಟಿ ರೂ.ಗೆ ದೆಹಲಿ ತಂಡಕ್ಕೆ ಕರೆಸಿಕೊಳ್ಳಲಾಗಿದೆ.
ಟ್ರೆಂಟ್ ಬೌಲ್ಟ್ (ಮೂಲ ಬೆಲೆ 1.5 ಕೋಟಿ) 5 ಕೋಟಿ ರೂ.ಗೆ ಕೆಕೆಆರ್ ತಂಡಕ್ಕೆ ಹರಾಜಾಗಿದ್ದಾರೆ.
ಕಾಗಿಸೋ ರಬಾಡಾ (ಮೂಲ ಬೆಲೆ 1 ಕೋಟಿ ರೂ.) 5 ಕೋಟಿ ರೂ.ಗೆ ದೆಹಲಿ ತಂಡಕ್ಕೆ ಹರಾಜಾಗಿದ್ದಾರೆ.
ಕೋರೆ ಆಂಡರ್ಸನ್ ಮೂಲ ಬೆಲೆ 1 ಕೋಟಿ ರೂ.ಗೆ ದೆಹಲಿ ತಂಡಕ್ಕೆ ಹರಾಜಾಗಿದ್ದಾರೆ.
ಹರಾಜು ಪ್ರಕ್ರಿಯೆ ಮುಂದುವರೆದಿದ್ದು, ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.