ಇಸ್ಲಾಮಾಬಾದ್: ಪಾಕಿಸ್ತಾನದ ಮಿಲಿಟರಿ ಹೆಲಿಕಾಫ್ಟರ್ ಎಂಐ-17 ಶುಕ್ರವಾರ ಪತನಗೊಂಡಿದ್ದು ಆರು ಜನರು ಮೃತರಾಗಿದ್ದಾರೆ. ಮೃತರಲ್ಲಿ ನಾರ್ವೆ ಮತ್ತು ಫಿಲಿಫೈನ್ಸ್ ರಾಯಭಾರಿಗಳು, ಮಲೇಷ್ಯಾ ಮತ್ತು ಇಂಡೋನೇಷ್ಯಾ ರಾಯಭಾರಿಗಳ ಪತ್ನಿಯರು ಸೇರಿದ್ದಾರೆ.
ಉತ್ತರ ಪಾಕಿಸ್ತಾನದಲ್ಲಿ ಯೋಜನೆಯೊಂದರ ಉದ್ಘಾಟನಾ ಸಮಾರಂಭಕ್ಕಾಗಿ ಈ ಹೆಲಿಕಾಫ್ಟರ್ ರಾಜತಾಂತ್ರಿಕರನ್ನು ಕೊಂಡೊಯ್ಯುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನವಾಝ್ ಶರೀಫ್ ಕೂಡ ಅದೇ ಸಮಾರಂಭಕ್ಕೆ ಬೇರೊಂದು ಹೆಲಿಕಾಫ್ಟರ್ನಲ್ಲಿ ತೆರಳಿದ್ದರು. ಅಪಘಾತದ ಸುದ್ದಿ ತಿಳಿದು ಇಸ್ಲಾಮಾಬಾದ್ಗೆ ವಾಪಾಸ್ಸಾಗಿದ್ದಾರೆ ಎನ್ನಲಾಗಿದೆ.
ಅಪಘಾತದ ವೇಳೆ ಈ ಹೆಲಿಕಾಫ್ಟರ್ನಲ್ಲಿ 11 ವಿದೇಶಿಯರು ಮತ್ತು 6 ಪಾಕಿಸ್ಥಾನಿಯರು ಇದ್ದರು. ಘಟನೆಯಲ್ಲಿ ಪೋಲ್ಯಾಂಡ್ ಮತ್ತು ನೆದರ್ಲ್ಯಾಂಡ್ ರಾಯಭಾರಿಗಳಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.