ನವದೆಹಲಿ: ಏಕಕಾಲಕ್ಕೆ ಒಂದೇ ರಾಕೆಟ್ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದ ಇಸ್ರೋ, ಇದೀಗ ಮಾರ್ಚ್ ಅಂತ್ಯ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಸೌತ್ ಏಶಿಯನ್ ಸೆಟ್ಲೈಟ್ ಉಡಾವಣೆ ಮಾಡುವುದಾಗಿ ಘೋಷಿಸಿದೆ.
2014 ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ನೆರೆ ದೇಶಕ್ಕೆ ನೆರವಾಗುವ ಉಪಗ್ರಹ ಉಡಾವಣೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ್ದರು. ಪೂರಕವಾಗಿ ಭೌಗೋಳಿಕ, ಸಂವಹನ ಹಾಗೂ ಟೆಲಿಮೆಡಿಸಿನ್ ಕೊಡುಗೆ ನೀಡುವ ಧ್ಯೇಯ ಹೊಂದಿರುವ ಸೌತ್ ಏಷಿಯನ್ ಉಪಗ್ರಹ ಉಡಾವಣೆಗೆ ಸಿದ್ಧತೆಗಳು ನಡೆದಿವೆ. ಸೌತ್ ಏಷಿಯನ್ ಸೆಟ್ಲೈಟ್ ಮೊದಲು ಸಾರ್ಕ್ ಎಂದಿತ್ತು. ಕಳೆದ ವರ್ಷ ಪಾಕ್ ಭಾರತವನ್ನು ಹೊರತುಪಡಿಸಿ ಈ ಪ್ರೊಜೆಕ್ಟ್ ಅಳವಡಿಸಿಕೊಂಡಿತ್ತು ಎಂದು ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟ್ರ್ನ ನಿರ್ದೇಶಕ ಕೆ.ಶಿವನ್ ತಿಳಿಸಿದ್ದಾರೆ.
ಸೌತ್ ಏಷಿಯನ್ ಸೆಟ್ಲೈಟ್ ಕುರಿತು ಎಲ್ಪಿಎಸ್ಸಿಯ (Liquid Propulsion Systems Centre) ನಿರ್ದೇಶಕ ಎಸ್.ಸೋಮನಾಥ್ ಅವರೂ ಹೇಳಿದ್ದು, ಮೊದಲ ಹಂತವು ಶ್ರೀಹರಿ ಕೋಟಾ, ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ನೊಂದಿಗೆ ಎಲ್ಪಿಎಸ್ಸಿ ಜೊತೆಗೂಡಿ ಎರಡನೇ ಹಂತದ ಸಿದ್ಧತೆ ಹಾಗೂ ಎಂಜಿನ್ಗೆ ಸಂಬಂಧಿಸಿದ ಕೆಲಸವು ಮಹೇಂದ್ರಗಿರಿಯಲ್ಲಿರುವ ಎಲ್ಪಿಎಸ್ಸಿ ಕೇಂದ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಏಕಕಾಲಕ್ಕೆ ಹೆಚ್ಚು ಉಪಗ್ರಹ ಉಡಾವಣೆ ಮಾಡುವುದರಿಂದ ಸ್ಪೇಸ್ನ ವೆಚ್ಚವೂ ಕೂಡಾ ಕಡಿಮೆಯಾಗಲಿದೆ. ಇದರಿಂದ ನೆರೆಯ ದೇಶಗಳಿಗೂ ಅನುಕೂಲ. ವ್ಯಾಪಾರ ಹಾಗೂ ಆರ್ಥಿಕ ದೃಷ್ಟಿಯಿಂದಲೂ ಇದು ಇಸ್ರೋಗೆ ಅನುಕೂಲವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.