ಹೈದರಾಬಾದ್: ಸರ್ಕಾರಿ ಸ್ವಾಮ್ಯದ ಟೆಲಿಕಾಂ ನಿರ್ವಾಹಕ ಬಿಎಸ್ಎನ್ಎಲ್ ಹೈದರಾಬಾದ್ನಲ್ಲಿ ಆ್ಯಪ್ ಆಧಾರಿತ ಸೇವೆ ಪ್ರಾರಂಭಿಸಿದೆ. ಈ ಸೇವೆಯಿಂದ ಗ್ರಾಹಕರು ತಮ್ಮ ಲ್ಯಾಂಡ್ಲೈನ್ಗೆ ಬಂದ ಕರೆಗಳನ್ನು ಮೊಬೈಲ್ ಮೂಲಕ ಸ್ವೀಕರಿಸಲು ಸಹಾಯಕವಾಗಲಿದೆ.
ಹೈದರಾಬಾದ್ನಲ್ಲಿ ನಿಯಮಿತ ಸ್ಥಿರ ಮೊಬೈಲ್ ದೂರವಾಣಿ (ಎಲ್ಎಂಎಫ್ಟಿ) ಸೇವೆಯನ್ನು ಬಿಎಸ್ಎನ್ಎಲ್ ಸಿಎಂಡಿ ಅನುಪಮ್ ಶ್ರೀವಾಸ್ತವ ಉದ್ಘಾಟಿಸಿದರು. ಲ್ಯಾಂಡ್ಲೈನ್ಗೆ ಸಮಾನವಾಗಿರುವ ಈ ಆ್ಯಪ್ ಆಧಾರಿತ ಮೊಬೈಲ್ ಸೇವೆ ಭಾರತದ ಟೆಲಿಕಾಂ ವಲಯದಲ್ಲೇ ಪ್ರಥಮವಾಗಿದೆ ಎಂದು ಪಿಎಸ್ಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಇಂಟರ್ನೆಟ್ ಬ್ರಾಡ್ಬ್ಯಾಂಡ್ ಹೊಂದಿದ ಬಿಎಸ್ಎನ್ಎಲ್ ಗ್ರಾಹಕರು ಹಾಗೂ ಹೊಸ ಗ್ರಾಹಕರು ಈ ಸೇವೆಯನ್ನು ಪಡೆಯಬಹುದು. ಈ ಸೇವೆಯನ್ನು ಪಡೆಯಲು ಗ್ರಾಹಕರಿಗೆ ಪ್ರತ್ಯೇಕ ದೂರವಾಣಿ ಸಂಖ್ಯೆಯನ್ನು ಒದಗಿಸಲಾಗುವುದು ಎಂದು ಬಿಎಸ್ಎನ್ಎಲ್ ತಿಳಿಸಿದೆ.
ಗ್ರಾಹಕರು ಆ್ಯಪ್ನ್ನು ಡೌನ್ಲೋಡ್ ಮಾಡಬೇಕಿದೆ. ಬಿಎಸ್ಎನ್ಎಲ್ ನೆಟ್ವರ್ಕ್ಗಳ (ಲ್ಯಾಂಡ್ಲೈನ್ ಮತ್ತು ಮೊಬೈಲ್) ಕರೆಗಳಿಗೆ ಪ್ರತಿ ನಿಮಿಷಕ್ಕೆ 1 ರೂ. ಹಾಗೂ ಬಿಎಸ್ಎಎನ್ಎಲ್ನಿಂದ ಇತರ ನೆಟ್ವರ್ಕ್ಗಳಿಗೆ (ಲ್ಯಾಂಡ್ಲೈನ್ ಮತ್ತು ಮೊಬೈಲ್) ಕರೆಗಳಿಗೆ ಪ್ರತಿ ನಿಮಷಕ್ಕೆ 1.20 ರೂ. ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.