ನವದೆಹಲಿ: ಭಾರತೀಯ ಸಂಜ್ಞಾ ಭಾಷೆ ಸಂಶೋಧನೆ ಮತ್ತು ತರಬೇತಿ ಕೇಂದ್ರ (ಐಎಸ್ಎಲ್ಆರ್ಟಿಸಿ) ಸೃಜನಶೀಲ ವಿನ್ಯಾಸಗಾರರು, ಕಲಾವಿದರು ಮತ್ತು ಹೊಸ ಆವಿಷ್ಕಾರ ರಚಿಸುವವರಿಗೆ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲು ಆಮಂತ್ರಿಸಿದೆ.
ಲೋಗೋ ವಿನ್ಯಾಸಗಾರರು ಐಎಸ್ಎಲ್ಆರ್ಟಿಸಿಯ ಲೋಗೋ ವಿನ್ಯಾಸಗೊಳಿಸಬೇಕಿದ್ದು, ಇದು ಐಎಸ್ಎಲ್ಆರ್ಟಿಸಿಯ ಗುರಿಗಳನ್ನು ಬಿಂಬಿಸಬೇಕು. ಅದು ಭಾರತೀಯ ಸಂಜ್ಞಾ ಭಾಷೆಯ ಕುರಿತು ಸಂಶೋಧನೆ ಮತ್ತು ತರಬೇತಿ ಚಟುವಟಿಕೆಗಳನ್ನು ನಿರೂಪಿಸುವಂತಿರಬೇಕು ಎಂದು ಐಎಸ್ಎಲ್ಆರ್ಟಿಸಿ ತಿಳಿಸಿದೆ.
ಐಎಸ್ಎಲ್ಆರ್ಟಿಸಿ ಲೋಗೋ ವಿನ್ಯಾಸ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ ೨೨ ಆಗಿದ್ದು, ವಿಜೇತರಿಗೆ 10,000 ರೂ. ನಗದು ಬಹುಮಾನವನ್ನು ನೀಡಲಾಗುವುದು ಎಂದು ಐಎಸ್ಎಲ್ಆರ್ಟಿಸಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.