ತಿರುವನಂತಪುರಂ: ಕೇರಳದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಎಸ್ಎಸ್ ಶಾಖೆಗಳು ನಡೆಯುತ್ತಿದ್ದು, ಎಲ್ಲ ಪ್ರಾಂತಗಳು ಸೇರಿದಂತೆ ಪ್ರತಿ ನಿತ್ಯ 5000 ಶಾಖೆಗಳು ನಡೆಯುತ್ತಿವೆ. ಶಾಖೆಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಆರ್ಎಸ್ಎಸ್ನ ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ ನಂದಕುಮಾರ್ ತಿಳಿಸಿದ್ದಾರೆ.
ಕೇರಳದಲ್ಲಿ ಎಡಪಂಥೀಯರ ಆಡಳಿತದ ನೆಲೆ ಕುಸಿಯುತ್ತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಎಸ್ಎಸ್ ಸೇರುತಿದ್ದಾರೆ. ಕೇರಳ ಅತ್ಯಧಿಕ ಶಾಖೆಗಳ ಪಾಲನ್ನು ಹೊಂದಿದ್ದು, ಪ್ರತಿ ದಿನ 5000 ಶಾಖೆಗಳು ನಡೆಯುತ್ತಿವೆ ಎಂದು ನಂದಕುಮಾರ್ ಹೇಳಿದ್ದಾರೆ.
ಆರ್ಎಸ್ಎಸ್ ತನ್ನ ಕಾರ್ಯನಿರ್ವಹಣೆಯ ಅನುಕೂಲಕ್ಕಾಗಿ ಉತ್ತರ ಪ್ರದೇಶವನ್ನು 6 ಪ್ರಾಂತಗಳನ್ನಾಗಿ ವಿಂಗಡಿಸಿದೆ. ಈ ಪ್ರಾಂತಗಳಲ್ಲಿ ಪ್ರತಿ ದಿನ ಒಟ್ಟು 8000 ಶಾಖೆಗಳು ನಡೆಯುತ್ತಿವೆ. ಮಹಾರಾಷ್ಟ್ರವನ್ನು 4 ಪ್ರಾಂತಗಳಾಗಿ ವಿಭಜಿಸಲಾಗಿದ್ದು, ಇಲ್ಲಿಯ ಎಲ್ಲ ಪ್ರಾಂತಗಳು ಸೇರಿ ಪ್ರತಿ ದಿನ 4000 ಶಾಖೆಗಳು ನಡೆಯುತ್ತವೆ ಎಂದು ನಂದಕುಮಾರ್ ಹೇಳಿದ್ದಾರೆ.
2010-11ರಲ್ಲೇ ಶಾಖೆಗಳ ಸಂಖ್ಯೆ ವರ್ಧಿಸಲು ಆರಂಭವಾಗಿದ್ದು, ಇದು ಸಂಘ ತನ್ನ ಅಸ್ತಿತ್ವ ಮತ್ತು ಯುವಕರ ಜೊತೆಗಿನ ಸಂಪರ್ಕವನ್ನು ವಿಸ್ತರಿಸುವ ಯೋಜನೆಗಳ ಪರಿಣಾಮವಾಗಿದೆ ಎಂದು ಅವರು ಹೇಳಿದ್ದಾರೆ.
ಆರ್ಎಸ್ಎಸ್ ದೇಶಾದ್ಯಂತ ತನ್ನ ಶಾಖೆಗಳನ್ನು ದುಪ್ಪಟ್ಟು ಮಾಡುವ ಮೂಲಕ ಒಂದು ಲಕ್ಷ ಶಾಖೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.