ಬೆಂಗಳೂರು: ವಿಶ್ವದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2017ಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬೆಂಗಳೂರಿನ ಯಲಹಂಕ ವಾಯನೆಲೆ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.
ಏರೋ ಇಂಡಿಯಾದ 11ನೇ ಆವೃತ್ತಿಯ 5 dingL ಪ್ರದರ್ಶನದಲ್ಲಿ ಭಾರತದ ದೇಶೀಯ ಯುದ್ಧ ವಿಮಾನ ತೇಜಸ್ ಸೇರಿದಂತೆ ಹಲವು ಯುದ್ಧ ವಿಮಾನಗಳ ಪ್ರದರ್ಶನಗಳು ನಡೆಯಲಿವೆ.
53 ಯುದ್ಧ ವಿಮಾನಗಳು ಪ್ರದರ್ಶನ ನೀಡಲಿದ್ದು, ಸುಮಾರು 549 ಕಂಪೆನಿಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.
ಏರೋ ಇಂಡಿಯಾ-2017 ಉದ್ಘಾಟಿಸಿ ಮಾತನಾಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭಾರತಕ್ಕೆ 400 ಫೈಟರ್ ಜೆಟ್ ಮತ್ತು 800-1000 ಹೆಲಿಕಾಪರ್ಗಳ ಅಗತ್ಯವಿದ್ದು, ವಿದೇಶಿ ಪಾಲುದಾರರ ಜೊತೆ ದೇಶೀಯವಾಗಿ ನಿರ್ಮಿಸಬಹುದು ಎಂದು ಹೇಳಿದ್ದಾರೆ.
ಎಂಐ-17 ಹೆಲಿಕಾಪ್ಟರ್ಗಳು ಭಾರತದ ತ್ರಿವರ್ಣ ಧ್ವಜ, ಭಾರತೀಯ ವಾಯು ಪಡೆ ಮತ್ತು ಏರೋ ಇಂಡಿಯಾ ಧ್ವಜಗಳ ಜೊತೆ ಬಾನಂಗಳದಲ್ಲಿ ಹಾರಾಡುವ ಮೂಲಕ ಪ್ರದರ್ಶನ ಆರಂಭಗೊಂಡಿತು. ಭಾರತದ ಹಗುರ ಯುದ್ಧ ವಿಮಾನ ತೇಜಸ್, ಮೊದಲ ದೇಶೀಯ ವಾಯುಗಾಮಿ ಕ್ಷಿಪ್ರ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (AEW&C) ಯುದ್ಧ ವಿಮಾನ, ಸೂರ್ಯಕಿರಣ್, ಸ್ವೀಡನ್ನ ಸ್ಕ್ಯಾಂಡಿನೇವಿಯನ್ ಗ್ರಿಪನ್ (ಎಸ್ಎಎಬಿ), ಅಮೇರಿಕಾದ ಎಫ್-16 ಆಲ್ಕನ್ ಹಾಗೂ ಫ್ರಾನ್ಸ್ನ ರೆಫೇಲ್ ಯುದ್ಧ ವಿಮಾನಗಳ ಪ್ರದರ್ಶನ ನಡೆದವು.
ಸುಧಾರಿತ ಹಾಕ್ ಯುದ್ಧ ವಿಮಾನದ ಪ್ರದರ್ಶನದೊಂದಿಗೆ 500ನೇ ಸಾರ್ವಜನಿಕ ಪ್ರದರ್ಶನ ನಡೆಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.