ಶ್ರೀಹರಿಕೋಟಾ : ಏಕಕಾಲದಲ್ಲಿ 104 ಉಪಗ್ರಹಗಳ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ – ಇಸ್ರೋ ಬುಧವಾರ ವಿಶ್ವದಾಖಲೆ ಬರೆದಿದೆ.
ಪಿಎಸ್ಎಲ್ವಿ-ಸಿ37 ರಾಕೆಟ್ ಮೂಲಕ 104 ಉಪಗ್ರಹಗಳ ಉಡಾವಣೆಗೆ ಸೋಮವಾರದಿಂದಲೇ ಕ್ಷಣಗಣನೆ ಪ್ರಾರಂಭವಾಗಿತ್ತು. ಬುಧವಾರ ಬೆಳಗ್ಗೆ 9.28 ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 104 ಉಪಗ್ರಹಗಳು ಯಶಸ್ವಿಯಾಗಿ ಉಡಾವಣೆಗೊಂಡಿವೆ.
320 ಟನ್ ಭಾರದ 44.4 ಮೀ. ಎತ್ತರದ ಪಿಎಸ್ಎಲ್ವಿಯನ್ನು ಬಳಸಲಾಗಿದ್ದು, ಕೇವಲ 600 ಸೆಕೆಂಡ್ಗಳಲ್ಲಿ 101 ಉಪಗ್ರಹಗಳು ಬಾಹ್ಯಾಕಾಶವನ್ನು ಸೇರಲಿವೆ. ಪ್ರತಿ ಉಪಗ್ರಹಗಳು ಪ್ರತಿ ಗಂಟೆಗೆ 27,000 ಕಿ.ಮೀ. ವೇಗದಲ್ಲಿ ಚಲಿಸಿಲಿದೆ.
104 ಉಪಗ್ರಹಗಳ ಪೈಕಿ ರಕ್ಷಣಾ ಹಾಗೂ ಆಯಕಟ್ಟಿನ ಉದ್ದೇಶಕ್ಕಾಗಿ ದೂರ ಸಂವೇದಿ ಸಾಮರ್ಥ್ಯವುಳ್ಳ ಕ್ಯಾಮೆರಾ ಹೊಂದಿದ 3 ಕಾರ್ಟೋಸ್ಯಾಟ್-2 ಉಪಗ್ರಹಗಳು ಮಾತ್ರ ಭಾರತದ್ದಾಗಿದ್ದು, ಇನ್ನುಳಿದ 101 ಉಪಗ್ರಹಗಳು ವಿದೇಶಗಳದ್ದಾಗಿದೆ. ಈ ಮೂಲಕ ಇಸ್ರೋ ಆರ್ಥಿಕ ಲಾಭವನ್ನೂ ಕಾಣಲಿದೆ.
ಅತಿ ಚಿಕ್ಕ ಉಪಗ್ರಹವು ಯುಎಸ್ಗೆ ಸೇರಿದ್ದಾಗಿದೆ. ಇಸ್ರೇಲ್, ಕಝಕ್ಸ್ಥಾನ್, ನೆದರ್ಲ್ಯಾಂಡ್, ಸ್ವಿಜರ್ಲ್ಯಾಂಡ್, ಅರಬ್ ಎಮಿರೇಟ್ಸ್ ದೇಶಗಳ ವಾಣಿಜ್ಯ ಉದ್ದೇಶಿತ ಉಪಗ್ರಹಗಳು ಉಡಾವಣೆಗೊಂಡಿವೆ. 96 ಉಪಗ್ರಹಗಳು ಯುಎಸ್ಗೆ ಸೇರಿದ್ದಾಗಿದೆ.
88 ಚಿಕ್ಕ ಉಪಗ್ರಹಗಳಿದ್ದು ಅವುಗಳು ‘Doves’ ಎಂಬ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಪ್ಲ್ಯಾನೆಟ್ ಇಂಕ್ ಕಂಪನಿಯದ್ದಾಗಿದೆ. ಈ ಉಪಗ್ರಹಗಳು ಭೂಮಿಯ ಚಿತ್ರಣವನ್ನು ಅತಿ ಕಡಿಮೆ ವೆಚ್ಚದಲ್ಲಿ ತೆಗೆಯಲು ಸಹಕಾರಿಯಾಗಿವೆ ಎನ್ನಲಾಗಿದೆ.
ಇಸ್ರೋ ನಿರ್ಮಿತ ಎರಡು ನ್ಯಾನೋ ಉಪಗ್ರಹಗಳು ವಿದೇಶಳಿಗೆ ಸೇರಿದ್ದು, ಇವು ರಾಕೆಟ್ಗಳನ್ನು ಚಲಿಸುತ್ತವೆ. ಇದರ ತೂಕ ಸುಮಾರು 1,378 ಕೆ.ಜಿ.
ರಷ್ಯಾ ಬಾಹ್ಯಾಕಾಶ ಕೇಂದ್ರವು ಒಟ್ಟು 37 ಉಪಗ್ರಹಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿತ್ತು.
ಭಾರತದಲ್ಲಿ ಇಸ್ರೋ ಪ್ರಪ್ರಥಮವಾಗಿ 104 ಉಪಗ್ರಹಗಳನ್ನು ಉಡಾವಣೆ ಮಾಡುವುದರ ಮೂಲಕ ಇದೊಂದು ಜಾಗತಿಕ ದಾಖಲೆಯಾಗಿದೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ 17 ವಿದೇಶಿ ಉಪಗ್ರಹಗಳು ಸೇರಿದಂತೆ ಒಟ್ಟು 23 ಉಪಗ್ರಹಗಳನ್ನು ಪಿಎಸ್ಎಲ್ವಿ-34 ನೆರವಿನಿಂದ ಉಡಾವಣೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.