ನವದೆಹಲಿ: ಪಾಕಿಸ್ಥಾನ ಮೂಲದ ಖೋಟಾ ನೋಟು ವ್ಯವಹಾರ ನಡೆಸುವವರು 2000 ರೂ. ನಕಲಿ ನೋಟುಗಳನ್ನು ಭಾತ-ಬಾಂಗ್ಲಾದೇಶ ಗಡಿ ಮೂಲಕ ಕಳ್ಳಸಾಗಣೆ ಮಾಡುತ್ತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಫೆಬ್ರವರಿ 8ರಂದು ಮುರ್ಷಿದಾಬಾದ್ನಲ್ಲಿ ನಕಲಿ ನೋಟುಗಳನ್ನು ವಶಪಡಿಸಿದ್ದು, ಓರ್ವನನ್ನು ಬಂಧಿಸಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಮೂಲದ ಅಜಿಜುರ್ ರೆಹ್ಮಾನ್ನ್ ೨೦೦೦ ಮುಖಬೆಲೆಯ ೪೦ ನೋಟುಗಳನ್ನು ಸಾಗಿಸುತ್ತಿದ್ದು, ಆತನನ್ನು ತನಿಖಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನೋಟುಗಳನ್ನು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸಹಾಯದಿಂದ ಪಾಕಿಸ್ಥಾನದಲ್ಲಿ ಮುದ್ರಿಸಲಾಗಿದ್ದು, ಬಾಂಗ್ಲಾ ಗಡಿ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ರೆಹ್ಮಾನ್ ತಿಳಿಸಿರುವುದಾಗಿ ಡೈಲಿ ಪತ್ರಿಕೆ ವರದಿ ಮಾಡಿದೆ.
ನಕಲಿ ನೋಟುಗಳ ಗುಣಮಟ್ಟವನ್ನು ಅವಲಂಬಿಸಿ ಪ್ರತಿ 2000 ರೂ. ನಕಲಿ ನೋಟುಗಳ ಕಳ್ಳಾಗಣೆಗೆ 400-600 ರೂ. ನೀಡಲಾಗುತ್ತಿದೆ. ನಕಲಿ 2000 ಮುಖಬೆಲೆಯ ನೋಟುಗಳ 17 ಭದ್ರತಾ ವೈಶಿಷ್ಟ್ಯಗಳಲ್ಲಿ ಕನಿಷ್ಟ 11 ವೈಶಿಷ್ಟ್ಯಗಳನ್ನು ಅನುಸರಿಸರಿಸಲಾಗಿದೆ ಎಂದು ವಿಚಾರಣೆ ವೇಳೆ ರೆಹ್ಮಾನ್ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.