ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಬಾಂಬ್ ಸ್ಫೋಟ ನಡೆದಿರುವುದು ಭಾರತದಲ್ಲಿ. ನ್ಯಾಶನಲ್ ಬಾಂಬ್ ಡೇಟಾ ಸೆಂಟರ್ ನೀಡಿರುವ ಅಂಕಿ ಅಂಶವಿದು.
ಕಳೆದ ವರ್ಷ ಭಾರತದಲ್ಲಿ 337 ಐಇಡಿ ಸ್ಫೋಟಗಳು ಸಂಭವಿಸಿವೆ. ಇರಾಕ್ನಲ್ಲಿ 221, ಪಾಕ್ನಲ್ಲಿ 161 ಬಾರಿ ದುಷ್ಕರ್ಮಿಗಳು ಕುಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಜಮ್ಮು ಕಾಶ್ಮೀರ, ಪುಲ್ವಾಮಾ ಜಿಲ್ಲೆ, ದಂತೇವಾಡದಲ್ಲಿ, ಚಲ್ಚಂಗ್ ಹೀಗೆ ವಿವಿಧೆಡೆ ಉಗ್ರರು ಬಾಂಬ್ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಛತ್ತೀಸ್ಗಡ್, ಕೇರಳ, ಮಣಿಪುರ,ಮಣಿಪುರ, ಓಡಿಸ್ಸಾಗಳಲ್ಲಿಯೂ ಬಾಂಬ್ ದಾಳಿಯ ಪ್ರಮಾಣ ಹೆಚ್ಚಾಗುತ್ತಲೇ ಬಂದಿರುವುದು ಗಂಭೀರ ಸಂಗತಿ. ಶಾಂತಿಯುತ ಭಾರತದಲ್ಲಿ ಉಗ್ರರ ಅಟ್ಟಹಾಸ ಹೆಚ್ಚುತ್ತಿರುವುದಕ್ಕೆ ಈ ಅಂಕಿ ಅಂಶಗಳು ಸಾಕ್ಷಿಯಾಗಿವೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.