ನವದೆಹಲಿ: ಮುಂದಿನ ವರ್ಷದಿಂದ ದೇಶದ ಎಲ್ಲಾ 3,500 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಏಕೈಕ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಸರ್ಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಬಿ.ಟೆಕ್ ಸೀಟುಗಳಿಗೆ ಪ.ಬಂಗಾಳ ಮತ್ತು ಇತರ ರಾಜ್ಯಗಳು ನಡೆಸುವ ಪರೀಕ್ಷೆಳು ಹಾಗೂ ವಿವಿಧ ಖಾಸಗಿ ಕಾಲೇಜುಗಳು ನಡಸುವ ಪ್ರವೇಶ ಪರೀಕ್ಷೆಗಳ ಬದಲು ಇಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಕೇಂದ್ರ ಪ್ರವೇಶ ಪರೀಕ್ಷೆ (ಎನ್ಇಇಇಎ)ಯನ್ನು ನಡೆಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಆದೇಶಿಸಿದೆ.
ಎಚ್ಆರ್ಡಿ ಸಚಿವಾಲಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಗೆ ಪರೀಕ್ಷಾ ನಿಯಮಗಳನ್ನು ರೂಪಿಸುವಂತೆ ಕೇಳಿಕೊಂಡಿದೆ. ಇಂಜಿನನಿಯರಿಂಗ್ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸರ್ಕಾರದ ನೀತಿ, ನಿಯಮಗಳಿಗೆ ಅನುಗುಣವಾಗಿ 2018-19ರಿಂದ ಸೂಕ್ತ ನಿಯಮ, ನೀತಿಗಳನ್ನು ಅನುಷ್ಠಾನಕ್ಕೆ ತರುವಂತೆ ಎಐಸಿಟಿಇಗೆ ಸೂಚಿಸಲಾಗಿದೆ ಎಂದು ಎಚ್ಆರ್ಡಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ.
ವರ್ಷದಲ್ಲಿ ಅನೇಕ ಬಾರಿ ಈ ಪರೀಕ್ಷೆ ನಡೆಸುವ ಬಗ್ಗೆ ಮತ್ತು ಭಾಷಾ ವೈವಿಧ್ಯತೆಯನ್ನು ಖಚಿತಪಡಿಸುವಂತೆ ಮಂಡಳಿಗೆ ಕೇಳಿಕೊಂಡಿದೆ.
ಎಂಬಿಬಿಎಸ್ ಕೋರ್ಸುಗಳ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಬಂಗಾಳಿ, ಅಸ್ಸಾಮಿ ಸೇರಿದಂತೆ ೧೦ ಭಾಷೆಗಳಲ್ಲಿ ನಡೆಸಲಾಗುತ್ತಿದ್ದು, ಎನ್ಇಇಇಎ ಕೂಡ ಇದೇ ರೀತಿ ಪರೀಕ್ಷೆ ನಡೆಸಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.