ಗದಗ: ಐತಿಹಾಸಿಕ ಖ್ಯಾತಿಯ ಲಕ್ಕುಂಡಿಯಲ್ಲಿ ಇಂದಿನಿಂದ ಎರಡು ದಿನಗಳ ಉತ್ಸವ ನಡೆಯಲಿದ್ದು, ಪ್ರಾಚೀನ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಲಿದೆ.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗದಗ ಸಹಯೋಗದಲ್ಲಿ ಈ ಉತ್ಸವ ಆಯೋಜಿಸಲಾಗಿದ್ದು, ದೇವಾಲಯಗಳ ತೊಟ್ಟಿಲು ಎಂದೇ ಪರಿಚಿತವಾಗಿರುವ ಲಕ್ಕುಂಡಿಯ ಶ್ರೀಮಂತ ಸಂಸ್ಕೃತಿ ಶಿಲ್ಪಕಲೆ ಪರಿಚಯಿಸುವ ಕುರಿತು ತಜ್ಞರಿಂದ ವಿವಿಧ ಬಗೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ರಿಡಿಸ್ಕವರಿಂಗ್ ದಿ ಗ್ಲೋರಿಯಸ್ ಹೆರಿಟೇಜ್ ಹಾಗೂ ಶಿಲ್ಪಕಾಶಿ ಲಕ್ಕುಂಡಿ A pictorial journey ಪುಸ್ತಕಗಳ ಬಿಡುಗಡೆಯೂ ಇದೆ. ಕವಿಗೋಷ್ಠಿ, ವಿಚಾರಗೋಷ್ಠಿ, ಸಾಹಿತ್ಯ ಗೋಷ್ಠಿ, ಮಹಿಳಾ ಗೋಷ್ಠಿ, ಜಾನಪದ ವೈವಿಧ್ಯ, ಗ್ರಾಮೀಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಲಕ್ಕುಂಡಿ ಉತ್ಸವಕ್ಕೆ ಮೆರಗು ತರಲಿವೆ.
ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಕಾರ್ಯಕ್ರಮಗಳು ಜರುಗಲಿದ್ದು, ಇಂದು ಸಂಜೆ 6.30ಕ್ಕೆ ಉತ್ಸವಕ್ಕೆ ಚಾಲನೆ ಸಿಗಲಿದೆ.
ವಿವಿಧ ಇಲಾಖೆಗಳ ವಸ್ತು ಪ್ರದರ್ಶನ, ವಾರ್ತಾ ಇಲಾಖೆಯ ಜನಪರ ಯೋಜನೆಗಳ ಕುರಿತ ಛಾಯಾಚಿತ್ರ ಪ್ರದರ್ಶನ ಹಾಗೂ ಲೇಸರ್ ಶೋ, ಗ್ರಾಮೀಣ ಕ್ರೀಡೆಗಳು, ಜನಪದ ಕಲಾ ಶ್ರೀಮಂತಿಕೆ ಬಿಂಬಿಸುವ ಮೆರವಣಿಗೆ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಜೊತೆಗೆ ಸ್ಥಳೀಯ ಕಲಾವಿದರ ಸಮಾಗಮ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಕಳೆಗಟ್ಟಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.