ಪಠ್ಯಕ್ರಮದಲ್ಲಿ ನೂತನ ಆವಿಷ್ಕಾರಗಳಾಗಬೇಕು: ಶ್ರೀನಿವಾಸ ಪೈ
ಪುತ್ತೂರು: ಪಠ್ಯಕ್ರಮದಲ್ಲೂ ಹೊಸ ಹೊಸ ಆವಿಷ್ಕಾರಗಳು ಸಾಧ್ಯತೆಗಳು ನಿರಂತರವಾಗಿ ಶೋಧಿಸಲ್ಪಡುತ್ತಿರಬೇಕು. ಅಧ್ಯಾಪಕರು ಸತತವಾದ ಸಂವಾದ, ವಿಚಾರ ಮಂಡನೆಗಳಲ್ಲಿ ಭಾಗಿಯಾಗುವುದರಿಂದ ವಿದ್ಯಾರ್ಥಿಗಳಿಗೆ ವಿಷಯಾಧಾರಿತ ಅನೇಕ ಒಳನೋಟಗಳನ್ನು ಒದಗಿಸುವುದಕ್ಕೆ ಸಾಧ್ಯ. ಹಾಗಾದಾಗ ಪಾಠ ಪ್ರವಚನಗಳು ಮತ್ತಷ್ಟು ಆಕರ್ಷಕಗೊಳ್ಳುತ್ತವೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹೇಳಿದರು.
ಅವರು ಕಾಲೇಜಿನ ಹಿಂದಿ ವಿಭಾಗವು ಮಂಗಳೂರು ವಿಶ್ವವಿದ್ಯಾನಿಲಯದ ಹಿಂದಿ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಪದವಿ ಹಂತದ ಹಿಂದಿ ಪಠ್ಯಕ್ರಮದ ಬಗೆಗೆ ಆಯೋಜಿಸಲಾದ ಪ್ರಬಂಧ ಮಂಡನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ಸಾಮಾನ್ಯವಾಗಿ ಪಠ್ಯಪದ್ಧತಿಗಳು ಅಧ್ಯಾಪಕರನ್ನೂ ಒಳಗೊಂಡಂತೆ ವಿದ್ಯಾರ್ಥಿಗಳಿಗೆ ಯಾಂತ್ರಿಕವೆನಿಸುವುದಿದೆ. ದಿನವೂ ಒಂದೇ ತೆರನಾದ ಪ್ರಕ್ರಿಯೆಗೆ ನಮ್ಮನ್ನು ನಾವು ಒಳಗೊಳ್ಳಿಸುವುದರಿಂದಲೇ ಇಂತಹ ಭಾವನೆ ಹುಟ್ಟಿಕೊಳ್ಳುತ್ತದೆ. ಆದರೆ ಅದನ್ನು ಮೀರಿ ಲವಲವಿಕೆಯನ್ನು ತುಂಬುವ ಹಿನ್ನಲೆಯಲ್ಲಿ ಅನೇಕ ತೆರನಾದ ಆಲೋಚನೆಗಳು ಹೊರಬರಬೇಕಿವೆ. ಈ ಹಿನ್ನೆಲೆಯಲ್ಲಿ ಕಾರ್ಯಾಗಾರಗಲು ಬಹೂಪಯೋಗಿ ಎಂದರು.
ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಹಿಂದಿ ಪ್ರಪಂಚದ ಎರಡನೇ ಅತಿ ದೊಡ್ಡ ಭಾಷೆ. ಸುಮಾರು ೫೩ ಶೇಕಡಾದಷ್ಟು ಮಂದಿ ಹಿಂದಿಯಲ್ಲೇ ದೈನಂದಿನ ಚಟುವಟಿಕೆ ನಡೆಸುತ್ತಿದ್ದಾರೆ. ಪ್ರಪಂಚದ ಸುಮಾರು 16 ರಿಂದ 20 ರಾಷ್ಟ್ರಗಳಲ್ಲಿ ಹಿಂದಿ ಭಾಷಿಕರಿದ್ದು, ಅದೇ ಭಾಷೆಯಲ್ಲಿ ವ್ಯವಹರಿಸುತ್ತಿದ್ದಾರೆ. ಆದರೆ ಇತ್ತೀಚೆಗಿ೯ನ ದಿನಗಳಲ್ಲಿ ಹಿಂದಿ ಭಾಷೆಯನ್ನು ಅರಿಯುತ್ತಿರುವವರ ಪ್ರಮಾಣ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿರುವುದು ಖೇದಕರ ಎಂದರು.
ತಳಮಟ್ಟದಿಂದ ಹಿಂದಿಯನ್ನು ಅಭಿವೃದ್ಧಿಪಡಿಸುವ ಕಾರ್ಯ ಆಗಬೇಕಿದೆ. ಪಠ್ಯದಲ್ಲಿ ಪ್ರಚಲಿತ ಸಂಗತಿಗಳನ್ನು ಒಳಪಡಿಸಿಕೊಳ್ಳಬೇಕಾದ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕಾರ್ಯಾಗಾರಗಳು ಈ ಬಗೆಗೆ ಚಿಂತಿಸಬೇಕು. ಹೊಸತನವನ್ನು ಮೆರೆಯುವಲ್ಲಿ ಏನು ಮಾಡಬಹುದು ಎಂಬುದು ಚರ್ಚೆಯ ವಿಷಯವಾಗಬೇಕು ಎಂದರಲ್ಲದೆ ಕಾರ್ಯಾಗಾರಗಳು ಮಿತಿಯಿಂದ ಹೊರಬಂದು ಸಾಧ್ಯತೆಗಳ ಅನ್ವೇಷಣೆ ನಡೆಸಬೇಕು ಎಂದು ಏಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಹಿಂದಿ ಅತ್ಯಂತ ಸಮೃದ್ಧ ಭಾಷೆ. ಅನೇಕಾನೇಕ ರಾಷ್ಟ್ರೀಯ ಚಳುವಳಿಗಳಿಗೆ ಪ್ರೇರೇಪಣೆ ನೀಡಿದ ಭಾಷೆ.ವಿಶ್ವಸಂಸ್ಥೆಯಲ್ಲೂ ಹಿಂದಿಗೆ ಆದ್ಯತೆ, ಮಾನ್ಯತೆ ನೀಡಲಾಗಿರುವುದನ್ನು ಗಮನಿಸಿದರೆ ಭಾಷೆಯ ಮಹತ್ವ ಅರ್ಥವಾಗುತ್ತದೆ. ಅಧ್ಯಾಪಕರು ಈ ಹಿಂದೆ ಮಾಡಿದ ಪಾಠವನ್ನೇ ಬೋಧಿಸುವುದಾದರೂ ಹಿಂದಿನ ಬಾರಿಗಿಂತ ಹೆಚ್ಚಿನ ಜ್ಞಾನವನ್ನು ಮುಂದಿನ ಬಾರಿ ಕೊಡುವ ಯತ್ನ ಮಾಡಬೇಕು. ಅದಕ್ಕಾಗಿ ಕಾರ್ಯಾಗಾರಗಳ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್, ಮಂಗಳೂರು ವಿ.ವಿ ಹಿಂದಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಶಿವರಾಮ್, ಪದಾಧಿಕಾರಿಗಳಾದ ಡಾ.ಕಲ್ಪನಾ ಪ್ರಭು, ಡಾ.ಮಂಜುನಾಥ್, ಕೇಂದ್ರ ಸರ್ಕಾರದ ಗೃಹ ಸಚಿವಾಲಯದಿಂದ ರಾಜಭಾಷಾ ವಿಭಾಗದ ಮಂಗಳೂರು ವಿ.ವಿ. ಮಟ್ಟಕ್ಕೆ ನಿಯುಕ್ತಾಗಿರುವ ಪ್ರೊ.ಸಂತೋಷ ಕುಮಾರ ಉಪಸ್ಥಿತರಿದ್ದರು. ಈ ಸಂದಬ್ದಲ್ಲಿ ಡಾ.ಮಂಜುನಾಥ್ ಅವರು ಹೊರತಂದ ಕೃತಿ ಹಿಂದಿ ಸಾಹಿತ್ಯ ಮೇ ವ್ಯಂಗ್ಯ ವಿಮರ್ಶ್ ಏವಂ ನರೇಂದ್ರ ಕೊಹ್ಲಿ ಅನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ದುರ್ಗಾರತ್ನ ಸಿ ಸ್ವಾಗತಿಸಿದರು. ವಿದ್ಯಾರ್ಥಿ ಶಿವಶಂಕರ ಮಯ್ಯ ಪ್ರಾರ್ಥಿಸಿದರು. ಹಿಂದಿ ಅಧ್ಯಾಪಕ ಸಂಘದ ಪದಾಧಿಕಾರಿ ಪ್ರೊ.ಮಾರ್ಷಲ್ ಲೂಯಿಸ್ ವಂದಿಸಿದರು. ಕಾಲೇಜಿನ ಹಿಂದಿ ಉಪನ್ಯಾಸಕಿ ಡಾ.ಆಶಾ ಸಾವಿತ್ರಿ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.