ಧಾರವಾಡ: ಪೂರ್ಣಾವಧಿ ಮತ್ತು ಹೆಚ್ಚಿನ ಅವಧಿಯ ಆಟದಲ್ಲಿ ಕಳೆದ ಬಾರಿಯ ಚಾಂಪಿಯನ್ ಬೆಂಗಳೂರಿನ ರೈಲ್ ವ್ಹೀಲ್ ತಂಡಕ್ಕೆ ಬೆವರಿಳಿಸಿದ ಆತಿಥೇಯ ಹುಬ್ಬಳ್ಳಿ-ಧಾರವಾಡ 3ನೇ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಹಾಕಿ ಸೆಮಿಫೈನಲ್ನಲ್ಲಿ ಸಡನ್ಡೆತ್ನಲ್ಲಿ ಸೋಲಲ್ಪಟ್ಟರಾದರೂ ಪ್ರೇಕ್ಷಕರ ಮನ ಗೆದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ನಡೆದ ಪುರುಷರ ಸೆಮಿಫೈನಲ್ ಪಂದ್ಯ ಅತ್ಯಂತ ಕುತೂಹಲಗೊಂಡಿತ್ತು. ರೈಲ್ ವ್ಹೀಲ್ ತಂಡಕ್ಕೆ ಭಾರಿ ಪ್ರತಿರೋಧ ಒಡ್ಡಿದ ಹುಬ್ಬಳ್ಳಿ-ಧಾರವಾಡ ತಂಡ ಸಡನ್ಡೆತ್ನಲ್ಲಿ 4-6 ರಿಂದ ಸೋತು ಚಿನ್ನದ ಹೋರಾಟದಿಂದ ನಿರ್ಗಮನವಾಯಿತು.
ಪೂರ್ಣಾವಧಿಯಲ್ಲಿ ಎರಡು ತಂಡಗಳು 2-2 ಗೋಲು ಬಾರಿಸಿದ್ದವು. ನಂತರ ಹೆಚ್ಚಿನ ಅವಧಿಯ ಅವಕಾಶ ನೀಡಿದಾಗ ಎರಡೂ ತಂಡಗಳಿಂದ ಗೋಲು ಬಾರದ್ದರಿಂದ ಸಡನ್ಡೆತ್ಗೆ ಅವಕಾಶ ನೀಡಲಾಯಿತು. ಸಡನ್ಡೆತ್ನಲ್ಲಿ ಬೆಂಗಳೂರಿನ ಉಮೇಶ, ಕುಶಾ, ಚೆಂಗಪ್ಪ ಮತ್ತು ಬಿಜು ಗೋಲು ಹೊಡೆದರು. ಆದರೆ ಅತಿಥೇಯ ತಂಡದಿಂದ ಶ್ರೀಶೈಲ ಮತ್ತು ಸಚಿನ್ ಅವರು ಮಾತ್ರ ಗೋಲಾಗಿ ಪರಿವರ್ತಿಸಲು ಸಾಧ್ಯವಾಯಿತು. ಅಂತಿಮವಾಗಿ ಬೆಂಗಳೂರು 6-4 ಗೋಲುಗಳಿಂದ ಜಯಗಳಿಸಿ ಫೈನಲ್ ತಲುಪಿತು.
ಇನ್ನೊಂದು ಸೆಮಿಫೈನಲ್ನಲ್ಲಿ ಕೊಡಗು 2-1 ಗೋಲುಗಳಿಂದ ಬೆಂಗಳೂರಿನ ಕ್ರೀಡಾ ಪ್ರಾಧಿಕಾರ ತಂಡವನ್ನು 2-1 ರಿಂದ ಪರಾಭವಗೊಳಿಸಿ ಬುಧವಾರ ಚಿನ್ನದ ಪದಕಕ್ಕೆ ರೈಲ್ ವ್ಹೀಲ್ ತಂಡವನ್ನು ಎದುರಿಸಲಿದೆ.
ಡಿ.ವೈ.ಇ.ಎಸ್. ಬಳ್ಳಾರಿ ಫೈನಲ್ಗೆ
ಮಹಿಳೆಯ ವಿಭಾಗದಲ್ಲಿ ಮೈಸೂರಿನ ಡಿ.ವೈ.ಇ.ಎಸ್. ಮತ್ತು ಬಳ್ಳಾರಿ ತಂಡಗಳು ಫೈನಲ್ ಪ್ರವೇಶಿಸಿವೆ. ಸೆಮಿಫೈನಲ್ನಲ್ಲಿ ಡಿ.ವೈ.ಇ.ಎಸ್. ಗೋಲುಗಳ ಸುರಿಮಳೆಗೈದು ಬೆಳಗಾವಿ ಮಹಿಳೆಯರನ್ನು 13-0 ಗೋಲುಗಳಿಂದ ಪರಾಭವಗೊಳಿಸಿದರು. ರಶ್ಮಿ 4, ರಮ್ಯಾ 3, ಮತ್ತು ಸ್ನೇಹಾ 2 ಪಡೆದ ಗೋಲುಗಳಿಂದ ವಿಜಯಿ ತಂಡ ವಿರಾಮಾರ್ಧಕ್ಕೆ 9-0 ಗೋಲುಗಳಿಂದ ಮುಂದಿತ್ತು.
ಇನ್ನೊಂದು ಸೆಮಿಫೈನಲ್ನಲ್ಲಿ ಬಳ್ಳಾರಿ ಮಹಿಳೆಯರು 4-1 ಗೋಲುಗಳಿಂದ ಆತಿಥೇಯ ಹುಬ್ಬಳ್ಳಿ-ಧಾರವಾಡ ತಂಡದ ಮೇಲೆ ಜಯ ಸಾಧಿಸಿ ಫೈನಲ್ ತಲುಪಿದವು. ಮೊದಲ 10 ನಿಮಿಷಗಳಲ್ಲಿ ನಿಖಿತಾ (5,6 ನಿಮಿಷ) ಮತ್ತು ವಿಜಯಲಕ್ಷ್ಮಿ (8ನೇ ನಿಮಿಷ) ಗೋಲು ಹೊಡೆದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.