ನವದೆಹಲಿ: ರಾಷ್ಟ್ರಪತಿ ಭವನದ ವಾರ್ಷಿಕ ಉದ್ಯಾನೋತ್ಸವವನ್ನು ಪ್ರಣಬ್ ಮುಖರ್ಜಿಯವರು ಫೆಬ್ರವರಿ 4 ರಂದು ಉದ್ಘಾಟಿಸಲಿದ್ದಾರೆ.
ಫೆ. 5 ರಿಂದ ಮಾರ್ಚ್ 12 ರವರೆಗೆ ಸೋಮವಾರ ಹೊರತುಪಡಿಸಿ ಉಳಿದ ದಿನಗಳು ಬೆಳಗ್ಗೆ 9.30 ರಿಂದ ಸಾಯಂಕಾಲ 4 ರವರೆಗೆ ಪ್ರಸಿದ್ಧ ಮುಘಲ್ ಉದ್ಯಾನವನ ಸಾರ್ವಜನಿಕರಿಗೆ ತೆರೆದಿರುತ್ತದೆ.
ಸಾರ್ವಜನಿಕರು ಸ್ಪಿರಿಚುವಲ್ ಗಾರ್ಡನ್, ಹರ್ಬಲ್ ಗಾರ್ಡನ್, ಬೊನ್ಸಾಯ್ ಗಾರ್ಡನ್ ಮತ್ತು ಮ್ಯೂಸಿಕಲ್ ಗಾರ್ಡನ್ ಗಳನ್ನು ವೀಕ್ಷಿಸಬಹುದು.
ರಾಷ್ಟ್ರಪತಿ ಎಸ್ಟೇಟ್ನ ಗೇಟ್ ಸಂಖ್ಯೆ 35 ರ ಮೂಲಕ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ. ಕುಡಿಯುವ ನೀರು, ಶೌಚಾಲಯ, ಪ್ರಥಮ ಚಿಕಿತ್ಸೆ, ವೈದ್ಯಕೀಯ ಸೌಲಭ್ಯ, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳಿಗೆ ವಿಶ್ರಾಂತಿ ಕೊಠಡಿ ಉದ್ಯಾನವನದ ಒಳಗೆ ಇರುತ್ತದೆ.
ಮಾರ್ಚ್ 10 ರಂದು ಮುಘಲ್ ಉದ್ಯಾನವನ ಅಂಗವಿಕಲರು, ರಕ್ಷಣಾ ಮತ್ತು ಅರೆ ಸೇನಾ ಪಡೆ, ರೈತರು, ದೆಹಲಿ ಪೊಲೀಸ್ ಪಡೆ ಸಿಬ್ಬಂದಿ ಭೇಟಿಗೆ ಬೆಳಗ್ಗೆ 9.30 ರಿಂದ ಸಂಜೆ 4 ರವರೆಗೆ ಮತ್ತು ದೃಷ್ಟಿದೋಷವುಳ್ಳವರಿಗೆ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ತೆರೆದಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.