ನವದೆಹಲಿ: 15 ವರ್ಷಗಳ ನಂತರ ರಾಜ್ಘಾಟ್ ಹೊಸರೂಪ ಪಡೆದಿದ್ದು, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಗಾಂಧೀಜಿಯವರ ಪುಣ್ಯತಿಥಿ ನಿಮಿತ್ತ ಇಂದು ಅನಾವರಣಗೊಳಿಸಿದರು.
ರಾಜ್ಘಾಟ್ ಅಭಿವೃದ್ಧಿಗೊಳಿಸುವ ಕೆಲಸ 15 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. 1999-2000 ಸಾಲಿನಲ್ಲಿ ನಗರಾಭಿವೃದ್ಧಿ ಸಚಿವ ಜಗಮೋಹನ್ ಅವರ ಅವಧಿಯಲ್ಲಿ ರಾಜ್ಘಾಟ್ ಸುಧಾರಣೆ ಕಂಡಿತ್ತು.
ಇದೇ ಮೊದಲ ಬಾರಿಗೆ ಗಾಂಧೀಜಿಯ ಕುರಿತು ಸಂಕ್ಷಿಪ್ತ ಮಾಹಿತಿಯನ್ನುರಾಜ್ಘಾಟ್ನ ಮೂರು ಗೇಟ್ಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ರಾಷ್ಟ್ರಪಿತ ಮಹಾತ್ಮನ ಸರಳ ಜೀವನದ ಪ್ರತಿಬಿಂಬ ಈ ಸಮಾಧಿ ಎಂದೂ ಅಲ್ಲಿ ಬರೆಯಲಾಗಿದೆ.
ಗಾಂಧೀಜಿಯ ವಿಚಾರ ಧಾರೆಗಳನ್ನು ಅಮೃತ ಶಿಲೆಯಲ್ಲಿ ಕೆತ್ತಲಾಗಿದ್ದು, ಓದಲು ಅನುವಾಗುವಂತೆ ಎಲ್ಇಡಿ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಗಾಂಧೀಜಿ ಜೀವನ ಪರಿಚಯಿಸುವ ಉದ್ದೇಶಕ್ಕೆ ಇಲ್ಲಿ ಆದ್ಯತೆ ನೀಡಲಾಗಿದೆ.
ಪಾರ್ಕಿಂಗ್ ಜಾಗದ ಶೆಡ್ಗಳ ಮೇಲೆ ಸೋಲಾರ್ ಪಾವರ್ ಅಳವಡಿಸಲಾಗಿದ್ದು, ಎಲ್ಇಡಿ ಹಾಗೂ ಸೋಲಾರ್ ಬಳಕೆಯಿಂದ ವಿದ್ಯುತ್ ಉಳಿತಾಯವೂ ಆಗಲಿರುವುದು ವಿಶೇಷ. ಭದ್ರತೆಯ ದೃಷ್ಟಿಯಿಂದ ಅಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ರಾಜ್ಘಾಟ್ನಲ್ಲಿ ಅದರ ನಿಯಂತ್ರಣಾ ವ್ಯವಸ್ಥೆ ಮಾಡಲಾಗಿದೆ.
ಮಹಾತ್ಮ ಗಾಂಧೀಜಿ ಸಮಾಧಿ ವೀಕ್ಷಣೆಗೆ ದಿನಕ್ಕೆ ಏನಿಲ್ಲವೆಂದರೂ 10 ಸಾವಿರ ದೇಶಿಯರು ಹಾಗೂ ವಿದೇಶಿಯರೂ ರಾಜ್ಘಾಟ್ಗೆ ಬರುತ್ತಾರೆ. ಆದರೆ ಇದುವರೆಗೂ ಕೇವಲ ಸಮಾಧಿ ವೀಕ್ಷಣೆ ಸಾಧ್ಯವಿತ್ತೇ ವಿನಃ, ಗಾಂಧೀಜಿಯ ಬದುಕಿನ ಅನಾವರಣ ಅಲ್ಲಿರಲಿಲ್ಲ.
ಆದ್ದರಿಂದ ರಾಜ್ಘಾಟ್ ಸಮಾಧಿ ಸಮಿತಿ ರಾಜ್ಘಾಟ್ಗೆ ವಿಭಿನ್ನ ಹಾಗೂ ಅರ್ಥಪೂರ್ಣ ರೂಪ ನೀಡುವಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯಾರಂಭ ಮಾಡಿತ್ತು. ಇದೀಗ ರಾಜ್ಘಾಟ್ ಹೊಸರೂಪದಲ್ಲಿ ವೀಕ್ಷಕರನ್ನು ಬರಮಾಡಿಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.