ನವದೆಹಲಿ: ಗ್ರೇಟ್ ಬ್ರಿಟನ್ ಚರ್ಚಾ ಸ್ಪರ್ಧೆ ದೆಹಲಿ ಆವೃತ್ತಿಯಲ್ಲಿ ಶ್ರಿ ವೆಂಕಟೇಶ್ವರ ಕಾಲೇಜಿನ ಅನ್ಮೋಲ್ ಶರ್ಮಾ ಮತ್ತು ಸಾದಿಕ್ ಬಾತ್ರಾ ಪ್ರಥಮ ಸ್ಥಾನ ಗಳಿಸಿದ್ದು, ಅಶೋಕಾ ವಿಶ್ವವಿದ್ಯಾಲಯದ ಪ್ರತ್ಯಕ್ಷಾ ಝಾ ಹಾಗೂ ಆರ್ಟಿರೋ ಬೋಸ್ ರನ್ನರ್ ಅಪ್ ಪಡೆದಿದ್ದಾರೆ.
ಬ್ರಿಟಿಷ್ ಹೈಕಮೀಷನ್ ಹಾಗೂ ಲೇಡಿ ಶ್ರೀ ರಾಮ್ ಕಾಲೇಜಿನ ಸಹಯೋಗದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಂದ ಒಟ್ಟು 32 ತಂಡಗಳು ಭಾಗವಹಿಸಿದ್ದವು. ಲಿಂಗ ಸಮಾನತೆ ಮತ್ತು ಸುಸ್ಥಿರ ಅಭಿವೃದ್ಧಿ ಪರ ಹಾಗೂ ವಿರೋಧವಾಗಿ ಸ್ಪರ್ಧಾಳುಗಳು ಮಾತನಾಡಿದರು.
ರಾಜಕೀಯ ಹಾಗೂ ದ್ವಿಪಕ್ಷೀಯ ಸಂಬಂಧಗಳ ಮುಖ್ಯಸ್ಥ, ಬ್ರಿಟಿಷ್ ಹೈ ಕಮೀಷನ್ ಹನ್ನಾಹ್ ಕಾಕ್ಬರ್ನ್ ಮಾತನಾಡಿ, ಸತತ ನಾಲ್ಕು ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿದ್ದೇವೆ. ಈ ಬಾರಿ ದೇಶದ ವಿವಿಧ ಭಾಗಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದು ವಿಶೇಷ ಎಂದರು.
ಹೊಸ ಪೀಳಿಗೆಯ ಧ್ವನಿ ಕೇಳಿ ಸಂತೋಷವಾಗಿದೆ. ಭಾರತದ ಯುವಜನತೆ ಬ್ರಿಟನ್ ಹಾಗೂ ಭಾರತದ ಜೀವಂತ ಸೇತುವೆ ಇದ್ದಂತೆ ಎಂದ ಅವರು, ಬಹುಮಾನ ವಿಜೇತರನ್ನು ಅಭಿನಂದಿಸಿದ ಅವರು, ಚರ್ಚಾ ಸ್ಪರ್ಧೆಯಂತೆ, ಬಹುಮಾನವೂ ವಿಶೇಷವಾಗಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.