ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಂಪ್ಯೂಟರ್ ಸಾಕ್ಷರತಾ ಮಿಷನ್ ಹೆಸರಿನಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವುದಾಗಿ ಹೇಳಿ www.nmcsm.in ವೆಬ್ಸೈಟ್ ಮೂಲಕ ಜನರನ್ನು ವಂಚಿಸುತ್ತಿದ್ದ ಉತ್ತರ ಪ್ರದೇಶದ ಇಬ್ಬರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ತಮ್ಮ ಸಂಸ್ಥೆಯಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವುದಾಗಿ ಹೇಳುತ್ತಿದ್ದ ಹಾಗೂ ಫ್ರಾಂಚೈಸಿ ನೀಡುವುದಾಗಿ ಹಣ ಪಡೆದು ವಂಚಿಸುತ್ತಿದ್ದವರು ಅತುಲ್ ಹಾಗೂ ಜಗಮೋಹನ್ ಸಿಂಗ್ ಈ ಕುರಿತು ಪ್ರಧಾನಿ ಕಚೇರಿ ಕಳೆದ ವರ್ಷವೇ ದೂರು ದಾಖಲಿಸಿತ್ತು. ಸಿಬಿಐ ಅಧಿಕಾರಿಗಳು ಕಸ್ಗಂಜ್ನ ಎರಡು ಸ್ಥಳಗಳಲ್ಲಿ ದಾಳಿ ನಡೆಸಿ ಪ್ರಾಥಮಿಕ ವಿಚಾರಣೆ ನಡೆಸಿದ್ದವು. ಇದೀಗ ತನಿಖೆ ಚುರುಕುಗೊಳಿಸಿ ಈ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಸಿಬಿಐ ಹೇಳಿದೆ.
ದೆಹಲಿ, ಅಲಿಘರ್ ಹಾಗೂ ಪುಣೆಯಲ್ಲಿಯೂ ತಮ್ಮ ಸಂಸ್ಥೆಯ ಶಾಖೆಗಳಿರುವುದಾಗಿ ವಂಚಕರು ನಂಬಿಸಿದ್ದರು. ಆದರೆ ಇವರು ತಮ್ಮ ಎಲ್ಲ ವ್ಯವಹಾರವನ್ನೂ ಆನ್ಲೈನ್ ಮೂಲಕವೇ ನಡೆಸಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.