ಭೋಪಾಲ್: ಮಧ್ಯಪ್ರದೇಶ ರಾಜ್ಯದಲ್ಲಿ ಮೇ 1ರಿಂದ ಪಾಲಿಥಿನ್ನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
68ನೇ ಗಣರಾಜ್ಯೋತ್ಸವ ಆಚರಣೆಗಳ ಸಂದರ್ಭ ಮಾತನಾಡುತ್ತಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ನಂತರ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿದೆ. ಪಾಲಿಥಿನ್ ಬಳಕೆ ನಗರೆಗಳನ್ನು ಸ್ವಚ್ಛವಾಗಿರಿಸಲು ಒಂದು ಪ್ರಧಾನ ಅಡಚಣೆಯಾಗಿದೆ. ಆದ್ದರಿಂದ ಅದನ್ನು ಮೇ ತಿಂಗಳಿನಿಂದ ನಿಷೇಧಿಸಲಾಗುವುದು ಎಂದು ಅವರು ಹೇಳಿದರು.
ಪರಿಸರಕ್ಕೆ ಹಾನಿಕಾರಕವಾಗಿರುವ ಪಾಲಿಥಿನ್ ಬದಲು ಪೇಪರ್, ಬಟ್ಟೆ ಚೀಲಗಳನ್ನು ಬಳಸಲಾಗುವುದು. ಯಾವುದೇ ವ್ಯಕ್ತಿ ಪಾಲಿಥಿನ್ ಬಳಸಿದಲ್ಲಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರ ಸಕಾರ ರಾಜ್ಯವನ್ನು ಬಾಹ್ಯ ಶೌಚ ಮುಕ್ತ ಪ್ರದೇಶವನ್ನಾಗಸುವ ಬಗ್ಗೆ ದೃಢಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.