ವಾಷಿಂಗ್ಟನ್: 2017ರ ಎಂಟು ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನ ಪಡೆದಿದೆ ಎಂದು ಅಮೇರಿಕಾದ ವಿದೇಶಿ ನೀತಿಗಳ ಮ್ಯಾಗಜಿನ್ ತಿಳಿಸಿದೆ. ಅಮೇರಿಕಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಈ ಪಟ್ಟಿಯಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಹಾಗೂ ಜಪಾನ್ ಜಂಟಿಯಾಗಿ ಎರಡನೇ ಸ್ಥಾನವನ್ನು ಹಂಚಿಕೊಂಡಿವೆ. ರಷ್ಯಾ 4ನೇ, ಜರ್ಮನಿ 5ನೇ ಹಾಗೂ ಭಾರತ 6ನೇ ಸ್ಥಾನದಲ್ಲಿವೆ. ಇರಾನ್ ಮತ್ತು ಇಸ್ರೇಲ್ ಕ್ರಮವಾಗಿ 7ನೇ ಹಾಗೂ 8ನೇ ಸ್ಥಾನಗಳನ್ನು ಪಡೆದಿವೆ.
ಜಪಾನ್ನಂತೆ ಭಾರತ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಪರಿಗಣಿಸಲಾಗಿದ್ದು, ಭಾರತಕ್ಕೆ ವಿಶ್ವ ವೇದಿಕೆಯಲ್ಲಿ ಅಪರೂಪದ ಮತ್ತು ಅಪೇಕ್ಷಣೀಯ ಸ್ಥಾನವಿದೆ. ಭಾರತ ವಿಶ್ವದ ಅತಿ ದೊಡ್ಡ ಆಂಗ್ಲ ಭಾಷೆ ಮಾತನಾಡುವ ಜನೆಸಂಖ್ಯೆ ಹೊಂದಿದ, ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಅದು ವಿಸ್ತಾರವಾದ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿದೆ ಎಂದು ಅಮೇರಿಕನ್ ಪತ್ರಿಕೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಸಮರ್ಥ ಅಧಿಕಾರದ ನಡುವೆ ಆರ್ಥಿಕತೆ ಸುಧಾರಣೆಗಳನ್ನು ಅಧುನೀಕರಿಸುವುದರ ಜೊತೆಗೆ ಪ್ರಭಾವಶಾಲಿ ರಾಷ್ಟ್ರಗಳ ಜೊತೆ ಮುನ್ನಡೆದಿದೆ ಎಂದು ಪತ್ರಿಕೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.