ನವದೆಹಲಿ: ದ್ವಿಪಕ್ಷೀಯ ಸಂಬಂಧಗಳ ಸಮಗ್ರ ಪಾಲುದಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ೧೪ ಒಪ್ಪಂದಗಳಿಗೆ ಭಾರತ ಹಾಗೂ ಯುಎಇ ಸಹಿ ಹಾಕಿವೆ.
ಹೈದರಾಬಾದ್ ಹೌಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಬುಧಾಬಿ ಯುವರಾಜ ಶೇಖ್ ಮೊಹಮ್ಮದ್ ಬಿನ್ ಝಯದ್ ಅಲ್ ನಹ್ಯನ್ ನಡುವೆ ನಿಯೋಗ ಮಟ್ಟದ ಮಾತುಕತೆ ಬಳಿಕ ಸಮಗ್ರ ಪಾಲುದಾರಿಕೆ, ರಕ್ಷಣೆ, ಸಾಗಣೆ, ಕೃಷಿ, ಮಾನವ ಅಪಹರಣಗಳ ನಿಗ್ರಹ ಮತ್ತು ತಡೆ ಮೊಲಾದ ಕ್ಷೇತ್ರಗಳ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಭಾರತದ ಸ್ಟ್ರೇಟಿಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ ಮತ್ತು ಅಬುಧಾಬಿ ನ್ಯಾಶನಲ್ ಆಯಿಲ್ ಕಂಪೆನಿ (ಎಡಿಎನ್ಒಸಿ) ನಡುವೆ ತೈಲ ಸಂಗ್ರಹಣೆ ಮತ್ತು ನಿರ್ವಹಣೆ ಒಪ್ಪಂದ ನಡೆಸಲಾಗಿದೆ.
ರಕ್ಷಣಾ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಶಸ್ತ್ರಾಸ್ತ್ರ ಉತ್ಪಾದನೆ, ತಂತ್ರಜ್ಞಾನ, ಅಧ್ಯಯನ, ಅಭಿವೃದ್ಧಿ, ಆವಿಷ್ಕಾರ ಸೇರಿದಂತೆ ಎರಡೂ ದೇಶಗಳ ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳ ಸಹಕಾರ ಸಂಬಂಧಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಶಸ್ತ್ರಾಸ್ತ್ರಗಳ, ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನ ವರ್ಗಾವಣೆಯಲ್ಲಿ ಸಹಕರಿಸಲಿವೆ.
ಭಾರತ ಎರಡೂ ದೇಶಗಳ ನಡುವಿನ ಅನುಕೂಲಕರ ವ್ಯಾಪಾರಕ್ಕೆ ಪ್ರತ್ಸಾಹಿಸುತ್ತಿದ್ದು, ಭಾರತ ಮತ್ತು ಯುಎಇ ನಡುವೆ ಇಂಧನ ಕ್ಷೇತ್ರದ ಒಪ್ಪಂದ ಅತ್ಯಂತ ಮಹತ್ವ ಎಂದು ಪ್ರಧಾನಿ ಮೋದಿ ಈ ವೇಳೆ ಹೇಳಿದ್ದಾರೆ.
ಭಯೋತ್ಪಾದನೆ ಮತ್ತು ತೀವ್ರಗಾಮಿತ್ವದ ಬಗ್ಗೆ ಭಾರತ ಹಾಗೂ ಯುಎಇ ಸಮಾನ ಕಾಳಜಿ ವಹಿಸಿದ್ದು, ಸಮಾಜದ ಭದ್ರತೆಗೆ ಭಯೋತ್ಪಾದನೆಯನ್ನು ಸದೆಬಡೆಯುವ ಅಗತ್ಯವಿದೆ. ರಕ್ಷಣೆ ಮತ್ತು ಭದ್ರತಾ ವಲಯಗಳ ಸಹಕಾರ, ಎರಡೂ ದೇಶಗಳ ನಡುವೆ ಉತ್ತಮ ಸಂಬಂಧಗಳು ಹೊಸ ದಿಕ್ಕಿನತ್ತ ಸಾಗಸಲಿದೆ ಎಂದು ಮೋದಿ ಹೇಳಿದ್ದಾರೆ.
ಇದಕ್ಕೂ ಮುನ್ನ ಅಬುಧಾಬಿ ಯುವರಾಜ ಅಲ್ ನಹ್ಯನ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.