ಮುಂಬಯಿ: ಒಂದು ಮಹತ್ವದ ಅಭಿವೃದ್ಧಿಯಂತೆ, ದೇಶಾದ್ಯಂತ ವೈದ್ಯಕೀಯ ಆಕಾಂಕ್ಷಿಗಳು ತಮ್ಮ 25ನೇ ವರ್ಷದ ತನಕ 3 ಬಾರಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ಬರೆಯಲು ಅವಕಾಶ ಪಡೆಯಲಿದ್ದಾರೆ.
ಪರೀಕ್ಷೆಯಲ್ಲಿ ತಮ್ಮ ಅದೃಷ್ಟವನ್ನು ನೋಡಲು ಪ್ರಯತ್ನಿಸುತ್ತಲೇ ಇರುವ ವಿದ್ಯಾರ್ಥಿಗಳನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪರೀಕ್ಷೆ ಬರೆಯುವ ಆಸಕ್ತ ಅಭ್ಯರ್ಥಿಗಳು ಹೊಸ ವಯೋಮಿತಿಯ ಮಾನದಂಡಗಳನ್ನು ಪೂರೈಸಬೇಕು. ನೀಟ್ ಪ್ರವೇಶ ಪರೀಕ್ಷೆಗೆ ಹಾಜರಾಗಲು ಕನಿಷ್ಟ ವಯಸ್ಸು 17 ವರ್ಷ ಇದ್ದು, ಮುಕ್ತ ವರ್ಗದವರಿಗೆ ಗರಿಷ್ಟ ವಯೋಮಿತಿ 25 ವರ್ಷ ಮತ್ತು ಮೀಸಲಾತಿ ವರ್ಗದವರಿಗೆ 30 ವರ್ಷ ಇರಲಿದೆ ಎಂದು ವಿಶ್ವವಿದ್ಯಾಲಯದ ಅನುದಾನಗಳ ಆಯೋಗ (ಯುಜಿಸಿ) ಸಭೆಯಲ್ಲಿ ನಿರ್ಧರಿಸಲಾಗಿದೆ.
ಅಭ್ಯರ್ಥಿಗಳು ಪದೇ ಪದೇ ಪ್ರಯತ್ನಿಸುವುದರಿಂದ ಇತರ ಆಸಕ್ತ ಅಭ್ಯರ್ಥಿಗಳಿಗೆ ಅವಕಾಶದ ಕೊರತೆ ಎದುರಾಗುತ್ತಿದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈವರೆಗೆ ನೀಟ್ ಪ್ರವೇಶಕ್ಕೆ ಗರಿಷ್ಟ ವಯೋಮಿತಿ ಅಥವಾ ಪರೀಕ್ಷೆಗೆ ಕೂರುವ ಅವಕಾಶಕ್ಕೆ ನಿರ್ದಿಷ್ಟ ಮಿತಿ ಇರಲಿಲ್ಲ. ಇದೊಂದು ಉತ್ತಮ ನಿರ್ಧಾರವಾಗಿದೆ ಎಂದು ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ನಿರ್ದೇಶನಾಯಲದ ನಿರ್ದೇಶಕ ಡಾ. ಪ್ರವೀಣ್ ಶಿಂಗಾರೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.