ನವದೆಹಲಿ: 68ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳ ಒಟ್ಟು 777 ಸಿಬ್ಬಂದಿಗಳಿಗೆ ಪೊಲೀಸ್ ಪದಕ ಹಾಗೂ 100 ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿ ನೀಡಲಾಗುವುದು.
ಪೊಲೀಸ್ ಪದಕಗಳ 100 ಶೌರ್ಯ ಪ್ರಶಸ್ತಿ (ಪಿಎಂಜಿ)ಗಳಲ್ಲಿ ಜಮ್ಮು ಮತ್ತು ಕಾಶ್ಮೀರ 32 ಶೌರ್ಯ ಪ್ರಶಸ್ತಿಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, ಆಂಧ್ರ ಪ್ರದೇಶ 12, ಜಾಖಂಡ್ 9, ಛತ್ತೀಸ್ಗಢ 7, ಉತ್ತರ ಪ್ರದೇಶ 7, ಮಣಿಪುರ 4, ದೆಹಲಿ 3 ಹಾಗೂ ಅಸ್ಸಾಂ 4 ನಂತರದ ಸ್ಥಾನಗಳಲ್ಲಿವೆ.
ಇವುಗಳಲ್ಲಿ 10 ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ.
ಗಣರಾಜ್ಯೋತ್ಸವದಂದು 777 ಸಿಬ್ಬಂದಿಗಳಿಗೆ ಪೊಲೀಸ್ ಪದಕ, 100 ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿ, ವಿಶೇಷ ಸೇವೆ ಸಲ್ಲಿಸಿದ 80 ಸಿಬ್ಬಂದಿಗಳಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಅತ್ಯಂತ ಶ್ಲಾಘನೀಯ ಸೇವೆಗೆ 597 ಸಿಬ್ಬಂದಿಗಳಿಗೆ ಪದಕ ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.