ನವದೆಹಲಿ: ನಿಮ್ಮ ಮಕ್ಕಳು ಪಾಸ್ಪೋರ್ಟ್ಗಾಗಿ ಎಲ್ಲಿಗೂ ಹೋಗುವುದು ಬೇಡ. ಪಾಸ್ಪೋರ್ಟ್ ನಿಮ್ಮ ಮನೆಗೆ ತಲುಪುತ್ತವೆ ಎಂದು ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
70 ವರ್ಷದ ಮಹಿಳೆಯೊಬ್ಬರು ತಮ್ಮ ಇಬ್ಬರು ವಿಕಲಚೇತನ ಮಕ್ಕಳಿಗಾಗಿ ಪಾಸ್ಪೋರ್ಟ್ ಪಡೆಯಲು Change.org ಮೂಲಕ ಮನವಿ (ಪೆಟೀಶನ್) ಸಲ್ಲಿಸಿ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ತಲುಪಿದ್ದರು.
ನನಗೆ 70 ವರ್ಷ, ನಮ್ಮ ಯಜಮಾನರಿಗೆ 75. ನನ್ನ ಒಬ್ಬ ಮಗಳು ಸರ್ವನಿ ಶೇ.90 ರಷ್ಟು ಅಂಗವಿಕಲೆ, ಇನ್ನೊಬ್ಬಳು ಆರ್.ಗಾಯತ್ರಿದೇವಿ ಶೇ.72 ರಷ್ಟು ಅಂಗವಿಕಲೆ. ಸ್ವತಂತ್ರವಾಗಿ ನಡೆಯುವುದೂ ಅವಳಿಗೆ ಕಷ್ಟ. ನಾವು 40 ವರ್ಷದಿಂದ ಈ ಇಬ್ಬರೂ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇವೆ. ಆದರೆ, ಇನ್ನೆಷ್ಟು ದಿನ ನಾವು ಬದುಕಿರುತ್ತೇವೆಯೋ ಗೊತ್ತಿಲ್ಲ. ನಮ್ಮ ಇಬ್ಬರು ಗಂಡು ಮಕ್ಕಳು ಯುಎಸ್ ಹಾಗೂ ಕೆನಡಾದಲ್ಲಿದ್ದಾರೆ. ನಮ್ಮಿಂದ ಸಾಧ್ಯವಾಗದಿದ್ದಾಗ ಅವರು ತಮ್ಮ ಸಹೋದರಿಯರನ್ನು ನೋಡಿಕೊಳ್ಳುತ್ತಾರೆ.
ಆದರೆ, ನಮ್ಮ ಮಕ್ಕಳು ದೈಹಿಕವಾಗಿ ತೀರಾ ದುರ್ಬಲರಿರುವ ಕಾರಣ ಪಾಸ್ಪೋರ್ಟ್ ಪಡೆಯಲು ಸಾಧ್ಯವಾಗುತ್ತಿಲ್ಲ. ನಾವು ವಾಸಿಸುವ ಸ್ಥಳಕ್ಕೆ ಅತಿ ಹತ್ತಿರವೆಂದರೆ 110 ಕಿ.ಮೀ ದೂರದಲ್ಲಿ ಪಾಸ್ಪೋರ್ಟ್ ಕೇಂದ್ರವಿದೆ. ಆದರೆ, ನಮ್ಮ ಮಕ್ಕಳನ್ನು ಬಸ್, ಅಥವಾ ಟ್ರೇನ್ನಲ್ಲಿ ಕರೆದುಕೊಂಡು ಹೋಗುವುದು ಕಷ್ಟ. ನಮಗೂ ವಯಸ್ಸಾಗಿರುವ ಕಾರಣ ಅವರನ್ನು ಕರೆದುಕೊಂಡು ಹೋಗಲೂ ಆಗುತ್ತಿಲ್ಲ. ಆದ್ದರಿಂದ ಸೇವಾ ಕೇಂದ್ರಕ್ಕೆ ಹಾಜರಾಗಲು ಆದೇಶಿಸದೇ, ಪಾಸ್ಪೋರ್ಟ್ ಒದಗಿಸಬೇಕೆಂದು ಸಚಿವರಾದ ಸುಷ್ಮಾ ಸ್ವರಾಜ್ ಅವರನ್ನು ನಮ್ರವಾಗಿ ವಿನಂತಿಸುತ್ತೇವೆ ಎಂದು ಮನವಿಯಲ್ಲಿ ಕೋರಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.