ಇಂದೋರ್: 500 ಹಾಗೂ 1000 ರೂಪಾಯಿ ನೋಟುಗಳ ಅಮಾನ್ಯೀಕರಣ ಪೂರ್ವನಿಯೋಜಿತ ನಡೆಯಾಗಿದ್ದು, ಫಲಾನುಭವಿಗಳಿಗೆ ನಗದು ನೇರ ಪಾವತಿ ಹಾಗೂ ಜನಧನ್ ಖಾತೆ ತೆರೆಯಲು ಆರಂಭಿಸಿದ್ದೇ ಇದಕ್ಕೆ ಸಾಕ್ಷಿ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ಮಂಗಳವಾರ ಡಿಜಿ ಧನ್ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ದಿಢೀರ್ ಎಂದು ನೋಟು ರದ್ದುಗೊಳಿಸಿದರು ಎಂದು ಚರ್ಚಿಸಲಾಗುತ್ತಿದೆ. ಆದರೆ, ನಾವು ಇದಕ್ಕೂ ಪೂರ್ವದಲ್ಲಿ ನಡೆದ ಕೆಲವು ಅಂಶಗಳನ್ನು ಗಮನಿಸಿದರೆ ನೋಟ್ ಬ್ಯಾನ್ ಮೊದಲೇ ನಿರ್ಧರಿತವಾಗಿತ್ತು ಎನಿಸುತ್ತದೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ಜನಧನ್ ಅಡಿಯಲ್ಲಿ ದೇಶದ ಎಲ್ಲರೂ ಬ್ಯಾಂಕ್ ಖಾತೆಯನ್ನು ಹೊಂದುವಂತೆ ಮಾಡುವಲ್ಲಿ ಕೇಂದ್ರ ಸರ್ಕಾರ ಬಹುದಿನಗಳ ಹಿಂದೆಯೇ ಮುತುವರ್ಜಿವಹಿಸಿತ್ತು.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿನ ಕೂಲಿಯನ್ನೂ ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಎಂದು ಹೇಳಿತ್ತು. ಇವೆಲ್ಲ ಹಿಂದಿನ ಘಟನಾವಳಿಗಳನ್ನು ಗಮನಿಸಿದರೆ ನೋಟುಗಳ ಸಂಖ್ಯೆಯನ್ನು ಕಡಿಮೆಗೊಳಿಸಿ, ಡಿಜಿಟಲ್ ಆರ್ಥಿಕತೆಯತ್ತ ಕೇಂದ್ರ ಚಿತ್ತ ಹರಿಸಿತ್ತು ಎಂಬುದು ಸ್ಪಷ್ಟ ಎಂದು ಅವರು ಹೇಳಿದ್ದಾರೆ.
ಡಿಜಿಟಲ್ ವ್ಯವಹರಣೆಯ ಮೂಲಕ ಕಪ್ಪು ಹಣದ ಚಲಾವಣೆಯನ್ನು ನಿಯಂತ್ರಣಕ್ಕೆ ತರಬಹುದಲ್ಲದೇ, ಅದನ್ನು ಗುರುತಿಸಲೂಬಹುದು ಎಂದಿದ್ದಾರೆ.
ಏನೇ ಖರೀದಿಸಿ ಅದಕ್ಕೆ ಸೂಕ್ತ ರಶೀದಿ ಪಡೆಯುವುದನ್ನು ಮರೆಯಬೇಡಿ ಎಂದು ಮಹಾಜನ್ ಜನರಲ್ಲಿ ವಿನಂತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.