ನವದೆಹಲಿ: ಗ್ರಾಮೀಣ ವಸತಿಗಳ ಹೊಸ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ವಸತಿ ಸೌಕರ್ಯ ದೊರೆಯದ ಕುಟುಂಬಳಿಗೆ ಬಡ್ಡಿ ದರಗಳ ಮೇಲೆ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ.
ನ್ಯಾಶನಲ್ ಹೌಸಿಂಗ್ ಬ್ಯಾಂಕ್ ಪ್ರಕಾರ, ಈ ಹೊಸ ಯೋಜನೆಗಳ ಅಡಿಯಲ್ಲಿ ಗ್ರಾಮೀಣ ಕುಟುಂಬಗಳು ಹೊಸ ಮನೆಗಳ ನಿರ್ಮಾಣ ಅಥವಾ ಪ್ರಸ್ತುತ ವಾಸಿಸುವ ಮನೆಗಳನ್ನು ವಿಸ್ತರಿಸಬಹುದಾಗಿದೆ. 2 ಲಕ್ಷ ರೂ. ವರೆಗೆ ಸಾಲ ಪಡೆಯುವ ವ್ಯಕ್ತಿಗಳಿಗೆ ಬಡ್ಡಿ ದರದ ಮೇಲೆ ಸಬ್ಸಿಡಿ ನೀಡಲಾಗುವುದು ಎಂದು ಅದು ಹೇಳಿದೆ.
ಕೇಂದ್ರ ಸರ್ಕಾರ ನ್ಯಾಶನಲ್ ಹೌಸಿಂಗ್ ಬ್ಯಾಂಕ್ಗೆ ಪ್ರಸ್ತುತ ನಿವ್ವಳ ಮೌಲ್ಯದ ಆಧಾರದಲ್ಲಿ ಶೇ.3ರಷ್ಟು ಸಹಾಯಧನ ಒದಗಿಸಲಿದ್ದು, ಅದು ಇತರ ಪ್ರಮುಖ ಸಾಲ ವಿತರಣಾ ಸಂಸ್ಥೆಗಳು, ವಾಣಿಜ್ಯ ಬ್ಯಾಂಕ್ಗಳಿಗೆ ನೀಡಲಿದೆ.
ಇದರಿಂದಾಗಿ ಸಾಲಗಾರರು ಪ್ರತಿ ತಿಂಗಳು ಕಟ್ಟಬೇಕಾಡ ಸಾಲದ ಮೇಲಿನ ಇಎಂಐ ಕಡಿಮೆಯಾಗಲಿದೆ.
ಈ ಯೋಜನೆ ಗ್ರಾಮೀಣ ಭಾಗಗಳಲ್ಲಿ ವಸತಿ ಸೌಲಭ್ಯ ಹೆಚ್ಚಿಸಲಿದ್ದು, ಗ್ರಾಮೀಣ ವಸತಿ ಕ್ಷೇತ್ರದಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸಲಿದೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.