ಕೊಲ್ಕತ್ತಾ: ಜನಪ್ರಿಯತೆಯನ್ನು ಕಳೆದುಕೊಂಡಿರುವ ಕಾಂಗ್ರೆಸ್ ಸುಧಾರಿಸುವುದು ಬಹುಕಷ್ಟ ಎಂದು ಖ್ಯಾತ ಇತಿಹಾಸಜ್ಞ ಹಾಗೂ ಅಂಕಣಕಾರ ರಾಮಚಂದ್ರ ಗುಹಾ ಅಭಿಪ್ರಾಯಿಸಿದ್ದಾರೆ.
ನೇತಾಜಿ ಸುಭಾಷ್ಚಂದ್ರ ಬೋಸ್ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 2024 ರವರೆಗಂತೂ ಕಾಂಗ್ರೆಸ್ ಚೇತರಿಸಿಕೊಳ್ಳುವ ಲಕ್ಷಣಗಳಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷವಾಗಿ ಒಂದು ಕಾಲದಲ್ಲಿ ಜನರ ಮನಗೆದ್ದಿದ್ದ ಕಾಂಗ್ರೆಸ್ ಪಕ್ಷವೀಗ ಮೊದಲಿನಂತೆ ಉಳಿದಿಲ್ಲ, ಕಾಂಗ್ರೆಸ್ ಸುಧಾರಣೆ ವಿಷಯದಲ್ಲಿ ನನ್ನ ಸ್ಮಾರ್ಟ್ ಬೆಟ್ ಕಟ್ಟಲು ಸಿದ್ಧ ಎಂದು ಅವರು ನಗೆ ಚಟಾಕಿ ಹಾರಿಸಿದ್ದಾರೆ.
ಕಾಂಗ್ರೆಸ್ ಹೊರತಾದ ಪಕ್ಷಗಳಲ್ಲಿನ ಆಂತರಿಕ ಭಿನ್ನಮತದ ಲಾಭ ಪಡೆದು ಮತ್ತೆ ಅಧಿಕಾರಕ್ಕೆ ಬಂದರೆ ಎಂದು ಸಭಿಕರು ಕೇಳಿದ ಪ್ರಶ್ನೆಗೆ, ಅಂತಹ ಸ್ಥಿತಿಯನ್ನು ದಾಟಿಯಾಗಿದೆ ಎಂದು ಗುಹಾ ಉತ್ತರಿಸಿದ್ದಾರೆ.
ಸದ್ಯ 44 ಲೋಕಸಭಾ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಗರಿಷ್ಠ ಎಷ್ಟು ಸ್ಥಾನ ಪಡೆಯಬಹುದು? 100 ಅಥವಾ 200 ಅಷ್ಟೇ. ಈ ವಿಚಾರವಾಗಿ ನಾನು ನನ್ನ ಫೋನ್ ಬೆಟ್ ಕಟ್ಟಲೂ ಸಿದ್ಧ ಎಂದು ಹೇಳಿರುವ ಅವರು, 2019 ಹಾಗೂ 2024 ರ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ ಪರ್ಯಾಯ ಎನ್ನಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.