ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರರ ನಡುವೆ ಸ್ಪರ್ಧೆ ಮುಂದುವರೆದಿದ್ದು, ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ದೈನಂದಿನ 30 ನಿಮಷಗಳ ಉಚಿತ ಸ್ಥಳೀಯ ಮತ್ತು ಎಸ್ಟಿಡಿ ವಾಯ್ಸ್ ಕರೆಗಳ ಆಫರ್ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ.
ಯಾವುದೇ ನೆಟ್ವರ್ಕ್ಗಳಿಗೆ ಉಚಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳ ರೂ. 149ರ ಪ್ಲಾನ್ ಹೊಸ ಬಿಎಸ್ಎನ್ಎಲ್ ಗ್ರಾಹಕರಿಗೆ ಲಭ್ಯವಾಗಲಿದೆ.
ಗ್ರಾಹಕರು 439 ರೂ. ಶುಲ್ಕದ 3 ತಿಂಗಳ ಅನಿಯಮಿತ ಉಚಿತ ಕರೆಗಳ ಆಫರ್ನ ಆಯ್ಕೆಯನ್ನೂ ಪಡೆಯಲಿದ್ದಾರೆ ಎಂದು ಬಿಎಸ್ಎನ್ಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜೊತೆಗೆ ಆಫರ್ನ ಭಾಗವಾಗಿ ಗ್ರಾಹಕರು 300 MB ಡಾಟಾ ಪಡೆಯಲಿದ್ದಾರೆ. ನ್ಯಾಯೋಚಿತ ಬಳಕೆ ನೀತಿ ರೂಪಿಸಲು ಇತರ ನೆಟ್ವರ್ಕ್ಗಳಿಗೆ ಕರೆಗಳನ್ನು 30 ನಿಮಿಷಗಳಿಗೆ ಸೀಮಿತಗೊಳಿಸಲಾಗಿದೆ ಎಂದು ದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.