ನವದೆಹಲಿ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಗಳ ಮಂಡಳಿ (ಸಿಎಸ್ಐಆರ್)ಯ ಟ್ಯಾಬ್ಲೋ 75 ವರ್ಷಗಳಿಂದ ಅಸ್ತಿತ್ವದಲ್ಲಿರುವ ಮಂಡಳಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಳನ್ನು ಗಣರಾಜ್ಯೋತ್ಸವ ಪೆರೇಡ್ನಲ್ಲಿ ಮೂಲಕ ಪ್ರದರ್ಶಿಸಲಿದೆ.
ಸಿಎಸ್ಐಆರ್ ಟ್ಯಾಬ್ಲೋ ಪ್ರದರ್ಶನಕ್ಕೆ ರಕ್ಷಣಾ ಸಚಿವಾಲಯ ಅನುಮತಿ ನೀಡಿದ್ದು, ಸಿಎಸ್ಐಆರ್ ಕಳೆದ ಆರು ದಶಕಗಳ ಸಾಧನೆಗಳನ್ನು ಹಾಗೂ ಜನಸಾಮಾನ್ಯರಿಗೆ ಈ ತಂತ್ರಜ್ಞಾನದಿಂದ ಆದ ಲಾಭಗಳ ಮೇಲೆ ಬೆಳಕು ಚೆಲ್ಲಲಿದೆ.
ಟ್ಯಾಬ್ಲೋದಲ್ಲಿ ಪ್ರಥಮವಾಗಿ ಉದ್ಯಮದ ಬೆಳವಣಿಗೆ ಮತ್ತು ಜನರ ಜೀವನಕ್ಕೆ ಸಹಾಯಕವಾದ ಕಲ್ಪನೆಗಳು ಮತ್ತು ಯೋಜನೆಗಳನ್ನು ಪ್ರದರ್ಶಿಸಲಿದೆ. ಟ್ಯಾಬ್ಲೋದ ಮಧ್ಯ ಭಾಗದಲ್ಲಿ ತನ್ನ 38 ಪ್ರಯೋಗಾಲಯಗಳ ದಶಕಗಳ ಪ್ರಮುಖ ಸಾಧನೆಗಳನ್ನು ಪ್ರದರ್ಶಿಸಲಿದ್ದು, ಕೊನೆಯಲ್ಲಿ ಕೈಗಾರಿಕಾ ಪಾಲುದಾರಿಕೆಯಲ್ಲಿ ನಿರ್ಮಿಸಲಾದ ಭಾರತದ ಮೊದಲ ದೇಶೀಯವಾಗಿ ನಿರ್ಮಿಸಲಾದ 5 ಸೀಟರ್ಗಳ ಬಹು ಉದ್ದೇಶಿತ ವಿಮಾನವನ್ನು ಚಿತ್ರಿಸಲಿದೆ.
ಈ ಹಿಂದೆ ಸಿಎಸ್ಐಆರ್ 2011ರಲ್ಲಿ ತನ್ನ ಔಷಧ ಶೋಧನೆ ಕಾರ್ಯಕ್ರಮವನ್ನು ಪ್ರದರ್ಶಿಸಿದ್ದು, 2009ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಭಾರತದ ಖಗೋಳಶಾಸ್ತ್ರ ಸಂಶೋಧನೆಗಳ ಉನ್ನತ ಅಂಶಗಳನ್ನು ಮಂಡಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.