ನವದೆಹಲಿ: ವಿದ್ಯುತ್ ಅವಘಡಕ್ಕೆ ತುತ್ತಾಗಿದ್ದ ತನ್ನ ಸಹೋದರನನ್ನು ರಕ್ಷಿಸಿದ್ದಕ್ಕಾಗಿ ಹುಬ್ಬಳ್ಳಿ ಹುಡುಗಿ ಸಿಯಾ ಖೋಡೆ, ಭಾರತೀಯ ಮಕ್ಕಳ ಕಲ್ಯಾಣ ನಿಧಿಯಿಂದ ನೀಡಲಾಗುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ಇಲ್ಲಿ ನಡೆದ ಶೌರ್ಯ ಪ್ರಶಸ್ತಿ-2016 ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಯಾ ಸೇರಿದಂತೆ ಒಟ್ಟು 25 ಸಾಹಸಿ, ಚತುರ ಮಕ್ಕಳಿಗೆ ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಿದರು.
ಹುಬ್ಬಳ್ಳಿಯ ತನ್ನ ಚಿಕ್ಕಪ್ಪನ ಮನೆಯಲ್ಲಿ 2015 ರಲ್ಲಿ ಈ ಘಟನೆ ಜರುಗಿದೆ. ಕಬ್ಬಿಣದ ಮೆಟ್ಟಿಲುಗಳ ಮಹಡಿಯನ್ನು ಹತ್ತುವಾಗ ಸೋದರ ಎಲ್ಲಪ್ಪ, ಅಲ್ಲೇ ತುಂಡಾಗಿ ಬಿದ್ದಿದ್ದ ಸರ್ವೀಸ್ ವೈಯರ್ ಹಿಡಿದು ಆಘಾತಕ್ಕೆ ಒಳಗಾಗಿ ಸಾವಿನ ಅಪಾಯದಲ್ಲಿದ್ದ, ಇದನ್ನು ಕಂಡ ಸಿಯಾ ಸಹೋದರನ ಅಂಗಿಯ ಕಾಲರ್ ಹಿಡಿದು ಜೋರಾಗಿ ಎಳೆದಿದ್ದಾಳೆ. ಆಗ ಅವನು ವೈರ್ ಬಿಟ್ಟು ಪಕ್ಕಕ್ಕೆ ಬಿದ್ದಿದ್ದಾನೆ. ಆಗಲೇ ಅವನ ಕೈ ಸುಟ್ಟಿತ್ತು. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದ ಎಂದು ಮಾಧ್ಯಮಕ್ಕೆ ಅವಳು ತಿಳಿಸಿದ್ದಾಳೆ.
ಹೆಣ್ಣು ಮಕ್ಕಳು ನಮ್ಮ ಹೆಮ್ಮೆ ಎನ್ನುವುದೇ ಇದಕ್ಕೆ. ರಾಜ್ಯ ಸರ್ಕಾರವೂ ಇವಳ ಧೈರ್ಯ ಮೆಚ್ಚಿ ಮಕ್ಕಳ ದಿನಾಚರಣೆಯಂದು ಪ್ರಶಸ್ತಿ ನೀಡಿ ಗೌರವಿಸಿತ್ತು. ತಮ್ಮನ ಪ್ರಾಣ ರಕ್ಷಿಸಿದ ಅವಳ ಬಗ್ಗೆ ನಮಗೆ ತುಂಬ ಹೆಮ್ಮೆ ಇದೆ. ಅವಳು ದೊಡ್ಡವಳಾದ ಮೇಲೆ ಭಾರತೀಯ ಸೇನೆ ಸೇರುವ ಬಯಕೆ ಹೊಂದಿದ್ದಾಳೆ. ಅದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಬಾಲಕಿ ಸಿಯಾಳ ಪಾಲಕರು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದು ಇಲ್ಲಿ ಪ್ರಸ್ತುತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.