ಚೆನ್ನೈ: ನಾನು 1924 ರಲ್ಲಿ ಜನಿಸಿದ್ದರೆ ಭಾರತ ಪಾಕ್ ಸಂಬಂಧದ ಕುರಿತು ಗಾಂಧೀಜಿಗೆ ಏಕತೆ ಬಗ್ಗೆ ಕೇಳುತ್ತಿದ್ದೆ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಾಕಿಸ್ಥಾನವನ್ನು ದ್ವೇಷಿಸುವುದಿಲ್ಲ. ನಾವೇ ಸೃಷ್ಟಿಸಿಕೊಂಡಿರುವ ಗಡಿ ವ್ಯವಸ್ಥೆಯನ್ನು ಅಳಿಸಿಹಾಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಲ್ಲಿಕಟ್ಟು ಪರವಾಗಿ ನಡೆಯುತ್ತಿದ್ದ ಹೋರಾಟ ಎಲ್ಲೆ ಮೀರಿದ ಹಿನ್ನೆಲೆಯಲ್ಲಿ ಶಾಂತತೆ ಕಾಪಾಡುವಂತೆ ಮನವಿ ಮಾಡಿರುವ ಅವರು, ಪ್ರತಿಭಟನೆಯಲ್ಲಿ ಪೊಲೀಸ್ ಪೇದೆಯೇ ಆಟೊಕ್ಕೆ ಬೆಂಕಿ ಹಚ್ಚುವುದನ್ನು ಕಂಡು ಗಾಬರಿಯಾಗಿರುವುದಾಗಿ ಹೇಳಿದ್ದಾರೆ.
ಯಾವ ಸಂಸ್ಕೃತಿಯ ಆಚರಣೆಯನ್ನೂ ಅನವಶ್ಯಕವಾಗಿ ತಡೆಯಬಾರದು. ಅನಿವಾರ್ಯ ಎನಿಸಿದಲ್ಲಿ ಅದನ್ನು ನಿಯಂತ್ರಿಸುವತ್ತ ಚಿಂತಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.