ವಾಸ್ಕೋ: ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಊಹಾಪೋಹಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅಸಾಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮುಂದಿನ ಗೋವಾ ಸರ್ಕಾರ ಮನೋಹರ್ ಪರಿಕ್ಕರ್ ಅವರ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಗೋವಾದ ವಾಸ್ಕೋದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಗೋವಾ ರಾಜ್ಯ ಮನೋಹರ್ ಪರಿಕ್ಕರ್ ಅವರ ರೂಪದಲ್ಲಿ ದೇಶಕ್ಕೆ ಒಂದು ದೊಡ್ಡ ಆಸ್ತಿಯನ್ನು ನೀಡಿದೆ. ದೆಹಲಿ ಮತ್ತು ಗೋವಾಗಳಲ್ಲಿ ಪರಿಕ್ಕರ್ ಅವರಿಗೆ ಭಾರೀ ಬೇಡಿಕೆ ಇದೆ. ಮನೋಹರ್ ಪರಿಕ್ಕರ್ ಅವರನ್ನು ಮರಳಿ ಗೋವಾಕ್ಕೆ ಕಳುಹಿಸುವಂತೆ ಜನರು ಬಯಸಿದ್ದಾರೆ ಎಂದು ಶಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪರಿಕ್ಕರ್ ಅವರು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವಂತೆ ಇಚ್ಛಿಸಿದ್ದು, ಚುನಾವಣೆ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು. ಆದರೆ ಪರಿಕ್ಕರ್ ಅವರು ಎಲ್ಲೇ ಕಾರ್ಯ ನಿರ್ವಹಿಸಿದರೂ ಗೋವಾ ಸರ್ಕಾರ ಪರಿಕ್ಕರ್ ಅವರ ನಾಯಕತ್ವದಲ್ಲೇ ಕಾರ್ಯ ನಿರ್ವಹಿಸಲಿದೆ ಎಂದು ಶಾ ಅವರು ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.