ಕೊಹಿಮಾ: ನಾಗಾಲ್ಯಾಂಡ್ ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಸಾಕ್ಷರತೆ ಒದಗಿಸುವ ದೃಷ್ಟಿಯಿಂದ, ಶೂನ್ಯ ಆರಂಭಿಕ ವೆಚ್ಚದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಜಾಗತಿಕ ವೇದಿಕೆ ಒದಗಿಸಲು ಮೇಜಾನ್ ಇಂಡಿಯಾ ನಾಗಾಲ್ಯಾಂಡ್ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ) ಜೊತೆ ಸಹಭಾಗಿತ್ವ ವಹಿಸಿದೆ.
ಅಮೇಜಾನ್ ಇಂಡಿಯಾ ನಾಗಾಲ್ಯಾಂಡ್ ಮಹಿಳಾ ಉದ್ಯಮಿಗಳಿಗಾಗಿ ಯಶಸ್ವಿ ಆನ್ಲೈನ್ ಉದ್ಯಮಗಳಲ್ಲಿ ಆನ್ಲೈನ್ ಮಾರಾಟ, ಕೌಶಲ್ಯ ಅಭಿವೃದ್ಧಿಗಳ ಕುಂದು ಕೊರತೆಗಳ ಬಗ್ಗೆ ತರಬೇತಿ ಮತ್ತು ಅಭಿವೃದ್ಧಿ ಕಾರ್ಯಾಗಾರವನ್ನು ನಡೆಸುತ್ತಿದೆ.
ಅಮೇಜಾನ್ ಇಂಡಿಯಾದಲ್ಲಿ ಮಹಿಳೆಯರು ಇ-ಉದ್ಯಮಿಗಳಾಗಿ ಪರಿವರ್ತನೆಗೊಳ್ಳಲು ಹಾಗೂ ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ ಪಾಲ್ಗೊಳ್ಳಲು ಅಮೇಜಾನ್ ಎಲ್ಲ ರೀತಿಯಲ್ಲಿ ಬೆಂಬಲ ನೀಡಲಿದೆ ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತೆನ್ಜಿನ್ ತಾಯ್ ಹೇಳಿದ್ದಾರೆ.
ಕೊಹಿಮಾದಲ್ಲಿ ಎರಡು ದಿನಗಳ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಲಾಗಿದಗದ್ದು, ಆನ್ಲೈನ್ ವ್ಯಾಪಾರ ಆರಂಭಿಸಲು ಅಗತ್ಯವಿರುವ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.
ಈ ತರಬೇತಿ ಕಾರ್ಯಕ್ರಮ ಆನ್ಲೈನ್ ವಾಣಿಜ್ಯೋದ್ಯಮ ಬೆಳೆಯಲು ಗೃಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ.
ಕಂಪೆನಿಯ ‘ಜಾಗತಿಕ ಮಾರಾಟ ಕಾರ್ಯಕ್ರಮ’ ಮೇ ೨೦೧೬ರಲ್ಲಿ ಆತಂಭಗೊಂಡಿದ್ದು, ‘ಮೇಕ್ ಇನ್ ಇಂಡಿಯಾ’ ಉತ್ಪನ್ನಗಳು ೧೮,೦೦೦ ಮಾರಾಟಗಾರರ ಮೂಲಕ ಅಮೇಜಾನ್ನ ೯ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.