Saturday, 16th November 2019
×
Home About Us Advertise With s Contact Us

ಆರ್‌ಎಸ್‌ಎಸ್ ಉಗ್ರ ಸಂಘಟನೆಯೆಂದು ಘೋಷಿಸಲು ಸಾಧ್ಯವಿಲ್ಲ: ಅಮೆರಿಕ

RSSನ್ಯೂಯಾರ್ಕ್: ಆರ್‌ಎಸ್‌ಎಸ್‌ನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲು ಸಾಧ್ಯವಿಲ್ಲ ಎಂದು ಅಮೆರಿಕ ನ್ಯೂಯಾರ್ಕ್ ಕೋರ್ಟ್‌ಗೆ ತಿಳಿಸಿದೆ.

ಅಲ್ಲದೇ ಈ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದಾವೆಯನ್ನು ವಜಾ ಮಾಡುವಂತೆ ನಾವು ಮನವಿ ಸಲ್ಲಿಸುತ್ತೇವೆ. ಆದರೆ ಅದಕ್ಕಾಗಿ ನಮಗೆ ಎಪ್ರಿಲ್ 14ರವರೆಗೆ ಕಾಲವಕಾಶ ಬೇಕಿದೆ ಎಂದು ಅದು ಕೋರಿದೆ.

ಅಮೆರಿಕ ಮೂಲಕ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆ ಆರ್‌ಎಸ್‌ಎಸ್‌ನ್ನು ವಿದೇಶಿ ಭಯೋತ್ಪಾದನಾ ಸಂಘಟನೆಯೆಂದು ಘೋಷಿಸುವಂತೆ ನ್ಯೂಯಾರ್ಕ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ಆರ್‌ಎಸ್‌ಎಸ್ ಫ್ಯಾಸಿಸ್ಟ್ ಸಿದ್ಧಾಂತವನ್ನು ಪ್ರದಿಪಾದಿಸುತ್ತದೆ ಎಂದು ಆರೋಪಿಸಿ ಅದರ ವಿರುದ್ಧ ದಾವೆ ಹೂಡಿರುವುದಾಗಿ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಮುಖಂಡ ಗುರುಪತ್‌ವಂತ್ ಎಸ್ ಪನ್ನುನ್ ತಿಳಿಸಿದ್ದಾರೆ.

ಆದರೆ ಆರ್‌ಎಸ್‌ಎಸ್‌ನ್ನು ಉಗ್ರ ಸಂಘಟನೆಯೆಂದು ಘೋಷಿಸಲು ನಿರಾಕರಿಸಿರುವ ಅಮೆರಿಕ ಈ ಬಗೆಗಿನ ತನ್ನ ನಿಲುವನ್ನು ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top
error: Content is protected !!