ನವದೆಹಲಿ: ಭಾರತದ ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರ, ಮಣಿಪುರ ಹಾಗೂ ಮೇಘಾಲಯ ರಾಜ್ಯತ್ವ (statehood) ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದಾರೆ.
‘ರಾಜ್ಯತ್ವ ದಿನದಂದು ಮೇಘಾಲಯದ ಜನತೆಗೆ, ಅದರ ಅಭಿವೃದ್ಧಿಯ ಪಯಣಕ್ಕೆ ನನ್ನ ಶುಭಾಶಯಗಳು. ರಾಜ್ಯತ್ವ ದಿನದಂದು ತ್ರಿಪುರದ ಜನತೆಗೆ ನನ್ನ ಶುಭಾಶಯಗಳನ್ನು ಕೋರುತ್ತಿದ್ದೇನೆ. ರಾಜ್ಯದ ಸರ್ವಾಂಗೀಣ ಬೆಳವಣಿಗೆಗಾಗಿ ಪ್ರಾರ್ಥಿಸುತ್ತೇನೆ’ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
‘ಮಣಿಪುರ ರಾಜ್ಯತ್ವ ದಿನಕ್ಕೆ ರಾಜ್ಯದ ಜನತೆಗೆ ಶುಭಾಶಯಗಳು. ಮಣಿಪುರ ಸುಖ, ಸಮೃದ್ಧಿ, ಸಂತೋಷದಿಂದ ಇರಲಿದೆ ಎಂದು ಭಾವಿಸುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಈಶಾನ್ಯ ಪ್ರದೇಶಗಳ (ಪುನಃ ಸಂಸ್ಥಾಪನೆ) ಕಾಯಿದೆ 1971ರ ಅಡಿಯಲ್ಲಿ ತ್ರಿಪುರ, ಮಣಿಪುರ ಹಾಗೂ ಮೇಘಾಲಯ ಜನವರಿ 21, 1972ರಂದು ರಾಜ್ಯತ್ವ ಪಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.