ನವದೆಹಲಿ: ಮುದ್ರಣ ಮಾಧ್ಯಮ ಕ್ಷೇತ್ರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಕುರಿತು ಪರಿಶೀಲಿಸುವಂತೆ ಇಲಾಖೆಯ ಕಾರ್ಯದರ್ಶಿ ಅಜಯ್ ಮಿತ್ತಲ್ ಅವರಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ನಾಯ್ಡು ಅವರು ಸೂಚಿಸಿದ್ದಾರೆ.
ಸಚಿವ ನಾಯ್ಡು ಅವರು, ಪತ್ರಿಕಾ ಮಾಧ್ಯಮದ ಕುರಿತು ಕಾಳಜಿ ವ್ಯಕ್ತಪಡಿಸಿದ್ದು, ಇತ್ತೀಚಿನ ವೇತನ ಮಂಡಳಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹಾಗೂ ಪ್ರಸ್ತಾಪಿತ ಜಿಎಸ್ಟಿ ಪರಿಧಿಯ ಕುರಿತು ವಿಶೇಷ ಗಮನಹರಿಸಿದ್ದಾರೆ ಎಂದು ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಅಗತ್ಯಬಿದ್ದಲ್ಲಿ ಹೂಡಿಕೆದಾರರೊಂದಿಗೆ, ಅಲ್ಲದೇ ಸಂಬಂಧಿಸಿದ ಉದ್ಯಮದ ಪ್ರತಿನಿಧಿಗಳೊಂದಿಗೆ ಸಚಿವರು ಮಾಧ್ಯಮ ಕ್ಷೇತ್ರದ ಪ್ರಸ್ತುತ ಸವಾಲುಗಳು ಹಾಗೂ ಪರಿಹಾರ ಕುರಿತು ಚರ್ಚಿಸಲು ಸಚಿವಾಲಯ ಸಿದ್ಧವಿದೆ ಎಂದು ತಿಳಿಸಿದ್ದು, ಸದ್ಯ ಮುದ್ರಣ ಮಾಧ್ಯಮ ಸಂಕಷ್ಟ ಸ್ಥಿತಿಯಲ್ಲಿರುವ ಕುರಿತು ಸಾಕಷ್ಟು ವರದಿಗಳನ್ನು ಗಮನಿಸಿರುವುದಾಗಿ ಹೇಳಿದೆ.
ಕೇಂದ್ರ ಸಾಮಾನ್ಯ ಬಜೆಟ್ ಸನಿಹವಾಗುತ್ತಿದ್ದಂತೆ ಪ್ರಕಟಗೊಂಡ ಈ ಹೇಳಿಕೆ, ಮುದ್ರಣ ಮಾಧ್ಯಮದ ಆಶಾಭಾವನೆಯನ್ನು ಹೆಚ್ಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.