ನವದೆಹಲಿ: ಭಾರತ ಅಣ್ವಸ್ತ್ರ ಪ್ರಸರಣ ನಿಷೇಧ ದಾಖಲೆಗಳ ಆಧಾರದ ಮೇಲೆ ಎನ್ಎಸ್ಜಿ ಸದಸ್ಯತ್ವವನ್ನು ಬಯಸಿದೆ. ಉಡುಗೊರೆಯ ರೂಪದಲ್ಲಿ ಅಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಚೀನಾಗೆ ತಿರುಗೇಟು ನೀಡಿದೆ.
ಎನ್ಎಸ್ಜಿಗೆ ಶಸ್ತ್ರಾಸ್ತ್ರ ಪ್ರಸರಣ ಒಪ್ಪಂದ (ಎನ್ಪಿಟಿ)ರಹಿತ ರಾಷ್ಟ್ರಗಳ ಸೇರ್ಪಡೆ, ರಾಷ್ಟ್ರಗಳು ಪರಸ್ಪರ ನೀಡುವ ‘ವಿದಾಯ ಉಡುಗೊರೆ’ಯಂತೆ ಆಗಿರಲು ಸಾಧ್ಯವಿಲ್ಲ ಎಂದು ಚೀನಾ ಇತ್ತೀಚೆಗೆ ಹೇಳಿತ್ತು.
ತಮ್ಮ ವಿದಾಯ ಭಾಷಣದಲ್ಲಿ ಮಾತನಾಡಿದ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ, ಎನ್ಎಸ್ಜಿ ಗ್ರೂಪ್ಗೆ ಭಾರತದ ಸೇರ್ಪಡೆಯ ಪ್ರಯತ್ನಕ್ಕೆ ಬೀಜಿಂಗ್ ಬಹಿಷ್ಠವಾಗಿದೆ (ಅನಿಷ್ಠ) ಎಂದು ಹೇಳಿದ್ದರು.
ಶಸ್ತ್ರಾಸ್ತ್ರ ಪ್ರಸರಣ ಒಪ್ಪಂದ (ಎನ್ಪಿಟಿ) ರಹಿತ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಭಾರತದ ಎನ್ಎಸ್ಜಿ ಸೇರ್ಪಡೆ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ ಎಂದು ಚೀನಾ ಹೇಳಿದೆ.
ಒಬಾಮಾ ಆಡಳಿತವನ್ನು ಟೀಕಿಸಿರುವ ಚೀನಾ, ಎನ್ಪಿಟಿ ರಹಿತ ರಾಷ್ಟ್ರಗಳ ಸೇರ್ಪಡೆ ರಾಷ್ಟ್ರಗಳು ಪರಸ್ಪರ ನೀಡುವ ವಿದಾಯ ಉಡುಗೊರೆ’ಯಂತೆ ಆಗಿರಲು ಸಾಧ್ಯವಿಲ್ಲ ಎಂದು ಹೇಳಿದೆ.
ಹಲವು ರಾಷ್ಟ್ರಗಳ ಬೆಂಬಲದ ಹೊರತಾಗಿ ಎನ್ಎಸ್ಜಿ ಗ್ರೂಪ್ಗೆ ಭಾರತದ ಸೇರ್ಪಡೆಯ ಪ್ರಯತ್ನಗಳಿಗೆ ಚೀನಾ ಅಡ್ಡಿಯಾಗಿದ್ದು, ಶಸ್ತ್ರಾಸ್ತ್ರ ಪ್ರಸರಣ ಒಪ್ಪಂದಕ್ಕೆ ಭಾರತ ಸಹಿ ಹಾಕದೇ ಇರುವುದು ಇದರ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.