ನವದೆಹಲಿ: ತೀವ್ರ ವಿವಾದಕ್ಕೆಡೆಯಾಗಿರುವ ಝಾಕಿರ್ ನಾಯಕನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬರೋಬ್ಬರಿ 100 ಕೋಟಿ ಬಂಡವಾಳ ಹೂಡಿದೆ ಎಂದು ಎನ್ಐಎ (ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿ) ಹೇಳಿದೆ.
ಭಾರತೀಯ ಬ್ಯಾಂಕುಗಳಲ್ಲಿ ಝಾಕೀರ್ ನಾಯಕ್ ಹೊಂದಿರುವ ೭೮ ಖಾತೆಗಳು ಪರಿಶೀಲನಾ ಹಂತದಲ್ಲಿವೆ ಎಂದು ಏಜೆನ್ಸಿ ಮುಖ್ಯಸ್ಥರು ತಿಳಿಸಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರದ ಗೃಹ ಸಚಿವಾಲಯ ಝಾಕಿರ್ ನಾಯಕನ ಎನ್ಜಿಓ ಐಆರ್ಎಫ್ಗೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಅಧಿನಿಯಮದ ಅಡಿ 5 ವರ್ಷ ನಿಷೇಧ ಹೇರಿದೆ.
ಝಾಕೀರ್ ನಾಯಕನ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿದ್ದೂ ಅಲ್ಲದೇ, ಅವನ ಅನೇಕ ಕಚೇರಿಗಳು, ಮನೆಗಳು, ಅವನಿಗೆ ಸಂಬಂಧಿಸಿದ ಪೀಸ್ ಟಿವಿ ಹಾಗೂ ಇತರ ಅವಶ್ಯಕ ಸ್ಥಳಗಳ ಮೇಲೆ ದಾಳಿ ಮಾಡಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.