ಪ.ಬಂಗಾಲ: ಸರ್ಕಾರಿ ಶಾಲೆಗಳಲ್ಲಿ ಸರಸ್ವತಿ ಪೂಜೆ ಆಚರಿಸದಂತೆ ಮಮತಾ ಬ್ಯಾನ್ರ್ಜಿ ನೇತೃತ್ವದ ಸರ್ಕಾರ ಆದೇಶ ಹೊರಡಿಸಿ ಮತ್ತೆ ತನ್ನ ಹುಸಿ ಅಲ್ಪಸಂಖ್ಯಾತ ಮೋಹಕ್ಕೆ ಮೊರೆ ಹೋಗಿದೆ.
ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಸರಸ್ವತಿ ಪೂಜೆ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ಇದು ಅಸಾಂವಿಧಾನಿಕವೂ ಹೌದು. ಆದ್ದರಿಂದ ಇದನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಸೈನ್ಸ್ ಕಮೀಟಿಯು ಮಮತಾ ಸರ್ಕಾರಕ್ಕೆ ಮನವಿ ಮಾಡಿರುವ ಕುರಿತು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಪ.ಮಿಡ್ನಾಪುರ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಿಗೆ ಈ ಕುರಿತು ಸುತ್ತೋಲೆಯನ್ನೂ ಕಳುಹಿಸಲಾಗಿದ್ದು, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳೂ ಕೂಡಾ ಸರಸ್ವತಿ ಪೂಜೆಯನ್ನು ಆಚರಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಕಳೆದ ವಾರವಷ್ಟೇ ಪಠ್ಯದಲ್ಲಿ ’ರಾಮಧೇನು’ ವಿನ ಬದಲು ’ರೊಂಗಧೇನು’ ಎಂದು ಬದಲಾಯಿಸಿದ್ದ ಮಮತಾ ಸರ್ಕಾರ ಇದೀಗ ವಿದ್ಯಾಧಿದೇವತೆ ಸರಸ್ವತಿ ಆರಾಧನೆಗೂ ಸಂಚಕಾರ ತಂದಿದೆ.
ಪ್ರಾಚೀನವಾಗಿ ನಡೆದುಕೊಂಡು ಬಂದ ಪರಂಪರೆಗಳು ಹೇಗೆ ಅಸಾಂವಿಧಾನಿಕ ? ಹೇಗೆ ಜಾತ್ಯತೀತತೆಗೆ ವಿರೋಧಿ? ಇವ್ಯಾವ ಪ್ರಶ್ನೆಗಳಿಗೂ ಅಲ್ಲಿ ಉತ್ತರವಿಲ್ಲ. ಸ್ವಯಂ ಘೋಷಿತ ಜಾತ್ಯತೀತವಾದಿಗಳು ಬಂಗಾಳದಲ್ಲಿ ಹಿಂದು ಧರ್ಮದ ಸಂಬಂಧವನ್ನು ಕಳಚಲು ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಬಹುದಷ್ಟೇ.
ಮುಸ್ಲಿಂ ಪಂಡಿತರು ಅನೇಕ ಬಂಗಾಳಿ ಪದಗಳನ್ನು ಉರ್ದುವಿಗೆ ಬದಲಾಯಿಸುವಂತೆ ಸಲಹೆ ಕೊಟ್ಟಿದ್ದು, ಸರ್ಕಾರ ಇದಕ್ಕೆ ಒಪ್ಪಿರುವುದಾಗಿಯೂ ಇತ್ತೀಚೆಗೆ ಅನೇಕ ಪತ್ರಿಕೆಗಳು ವರದಿ ಮಾಡಿವೆ. ಈ ಬೆಳವಣಿಗೆ ನೋಡಿದರೆ ಮತ್ತೊಂದು ಕಾಶ್ಮೀರವೇ ಅಲ್ಲಿ ಸೃಷ್ಟಿಯಾಗುವ ಲಕ್ಷಣವಿದೆ.
ಈಗಾಗಲೇ ಅನೇಕ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಹಿಂದುಗಳು ಬದಲಾಗುತ್ತಿರುವ ವಾತಾವರಣಕ್ಕೆ ಹೆದರಿ ನಗರಗಳನ್ನು ಬಿಟ್ಟಾಗಿದೆ. ಮಾಲ್ಡಾ, ದುಲ್ಗರ್ ಮುಂತಾದೆಡೆ ಹಿಂದೂಗಳು ಭಯದಿಂದ ಬದುಕುತ್ತಿದ್ದಾರೆ. ಪ್ರಾರ್ಥನೆಗೆ ಅವಕಾಶವಿಲ್ಲ, ಅದೆಷ್ಟೋ ಜನರಿಗೆ ಮನೆಯಿಂದ ಹೊರಬರಲು ಭಯ. ಇನ್ನೂ ಅನೇಕರು ಸೂರಿಲ್ಲದೆ ರಸ್ತೆ ಬದಿಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಉಪನ್ಯಾಸ ಕಾರ್ಯಕ್ರಮ, ಆರ್ಎಸ್ಎಸ್ ರ್ಯಾಲಿ, ಪಠ್ಯದಲ್ಲಿ ರೊಂಗಧೇನು ಹೀಗೆ ಎಲ್ಲ ವಿಷಯದಲ್ಲೂ ಮಮತಾ ಸರ್ಕಾರ ಕೀಳು ರಾಜಕೀಯವನ್ನೇ ಮೆರೆದಿದೆ. ಆದರೆ ಕೇವಲ ಮತಬ್ಯಾಂಕ್ ರಾಜಕಾರಣದ ಹಿಂದೆ ಬೀಳುವ ಸೋ ಕಾಲ್ಡ್ ಸೆಕ್ಯುಲರಿಸ್ಟ್ಗಳು, ದೇಶದ ಹಿತವನ್ನೇ ಬಲಿಕೊಡುವುದು ಯಾವ ನ್ಯಾಯ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.