ನವದೆಹಲಿ: ಸರ್ವ ಶಿಕ್ಷಾ ಅಭಿಯಾನದ ಮೇಲ್ವಿಚಾರಣೆಯೊಂದಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಪ್ರಗತಿ ತರಲು ಕೇಂದ್ರ ಸರ್ಕಾರ ‘ShaGun’ ವೆಬ್ ಪೋರ್ಟಲ್ ಬಿಡುಗಡೆ ಮಾಡಿದೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ವೆಬ್ ಪೋರ್ಟಲ್ ಬಿಡುಗಡೆ ಮಾಡಿದ್ದು, ಇದನ್ನು ಮಾನವ ಸಂಪನ್ಮೂಲ ಸಚಿವಾಲಯ ಹಾಗೂ ವಿಶ್ವ ಬ್ಯಾಂಕ್ ಸಹಯೋಗದಲ್ಲಿ ರೂಪಿಸಲಾಗಿದೆ.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಗಣಿತ, ಭಾಷೆ, ಗ್ರಹಿಕೆ, ವ್ಯಾಕರಣಗಳ ಮುಂತಾದವುಗಳ ಕ್ರೋಢೀಕರಣದ ಮೂಲಕ ಕಲಿಕೆಯ ಉತ್ತಮ ಫಲಿತಾಂಶ ಪಡೆಯಲು ಕಲಿಕಾ ಸಾಮರ್ಥರ್ಯದ ಮೌಲ್ಯಮಾಪನ ಗುಣಮಟ್ಟ ಸ್ಥಾಪಿಸಲಾಗವುದು. ೨೦೦೯ರ ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಎಲ್ಲ ವಿದ್ಯಾರ್ಥಿಗಳು ೧ ತರಗತಿಯಿಂದ ೮ನೇ ತರಗತಿ ವರೆಗಿನ ಕನಿಷ್ಠ ಶಿಕ್ಷಣ ಪಡೆಯುವುದನ್ನು ಖಚಿತಪಡಿಸಲಾಗುವುದು ಎಂದು ಜಾವಡೇಕರ್ ಹೇಳಿದ್ದಾರೆ.
ಎಚ್ಆರ್ಡಿ ಸಚಿವಾಲಯ ತನ್ನ ವೆಬ್ಸೈಟ್ನಲ್ಲಿ ಇದರ ಕಡತವನ್ನು ಅಪ್ಲೋಡ್ ಮಾಡಿದ್ದು, ಇ-ಮೇಲ್ ಮೂಲಕ ಜನರ ಸಲಹೆ ಮತ್ತು ಅಭಿಪ್ರಾಯಗಳನ್ನು ಕೇಳಿಕೊಂಡಿದೆ.
ಇದು ತಂತ್ರಜ್ಞಾನದ ಮೂಲಕ ರಚಿಸಲಾಗಿರುವ ಒಂದು ಜಾಗತಿಕ ವೇದಿಕೆಯಾಗಿದ್ದು, ಭಾರತದ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ರಚನಾತ್ಮಕ ಕಲಿಕೆಯ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದು ಜಾವಡೇಕರ್ ಹೇಳಿದ್ದಾರೆ.
ಕಲಿಕೆಯ ಫಲಿತಾಂಶವೇ ಮಕ್ಕಳ ಗುಣಮಟ್ಟವನ್ನು ನಿರ್ಣಯಿಸಲಿದೆ. ಇದು ವವಿಧ ಹಂತಗಳಲ್ಲಿ ಅವರ ಕಲಿಕೆಯ ಮೌಲ್ಯಮಾಪನಕ್ಕೆ ಸಹಾಯವಾಗಲಿದೆ. ಶಿಕ್ಷಕರಿಗೆ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶದಿಂದ ಅವರ ಪ್ರತ್ಯೇಕ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯ ತಿಳಿದುಕೊಳ್ಳಲು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
ಸರ್ವ ಶಿಕ್ಷಾ ಅಭಿಯಾನ ೬-೧೪ ವರ್ಷದೊಳಗಿನ ಮಕ್ಕಳ ಸಾರ್ವತ್ರಿಕ ಶಿಕ್ಷಣ ಪ್ರವೇಶವನ್ನು ನೀಡುವ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.