ದಾವೋಸ್: ಭಾರತದ ಅಭಿವೃದ್ಧಿ ಕುರಿತು ವಿವರಿಸುತ್ತಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಭಾರತದಲ್ಲಿ ಹುಡಿಕೆ ಮಾಡಲು ಇದು ಸಕಾಲ ಮತ್ತು ಸೂಕ್ತ ಸಮಯ ಎಂದು ಹೇಳಿದ್ದಾರೆ.
ಇಲ್ಲಿ ನಡೆಯಲಿರುವ ಜಾಗತಿಕ ವ್ಯಾಪಾರ ನಾಯಕರ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಗೂ ಮುನ್ನ ಸಿಐಐ ಮತ್ತು ಬಿಸಿಜಿ ಆಯೋಜಿಸಿದ್ದ ಉಪಹಾರ ಅವಧಿಯ ಸಂದರ್ಭ ಮಾತನಾಡುತ್ತಿದ್ದ ಅವರು, ಭಾರತ ವಿವಿಧ ದಾಖಲೆ ಮಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಗಳನ್ನು ಆರಂಭಿಸಿದೆ. ಭೂಸ್ವಾಧೀನ ಮತ್ತು ಪರಿಸರ ಪರವಾನಗಿ ಸಂಬಂಧಿತ ಯಾವುದೇ ಸಮಸ್ಯೆಗಳು ಎದುರಾಗಿಲ್ಲ. ಬಂದರು ಕ್ಷೇತ್ರ ಕೂಡ ವೇಗವಾಗಿ ಬೆಳೆಯುತ್ತಿದ್ದು, ಸಮುದ್ರ ಪ್ರಯಾಣ ಪ್ರವಾಸೋದ್ಯಮವನ್ನು ಕೇಂದ್ರೀಕರಿಸುವುದರೊಂದಿಗೆ 6 ಹೊಸ ಬಂದರುಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ಲ್ಯಾಂಡ್ ರಿವರ್ವೇ ಮತ್ತೊಂದು ಪ್ರಮುಖ ಕ್ಷೇತ್ರವಾಗಿದ್ದು, ಗಂಗಾ ಪ್ರದೇಶದಲ್ಲಿ ಇದರ ಕಾರ್ಯ ಆರಂಭಗೊಂಡಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಸಚಿವಾಲಯ ಕೆಲವು ಹೊಸ ಯೋಜನೆಗಳನ್ನು ಹೊಂದಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾಜಿಸ್ಟಿಕ್ ಪಾರ್ಕ್ಗಳ ನಿರ್ಮಾಣ ಮಾಡಲಾಗುವುದು. ಆದರೆ ಕೃಷಿ ಪ್ರಮುಖ ಆದ್ಯತೆಯಾಗಿರಲಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಅನಾಣ್ಯೀಕರಣದ ನಡೆ ಭಾರತದ ಆರ್ಥಿಕತೆ ಬಲಪಡಿಸುವಲ್ಲಿ ಸಹಾಯಕವಾಗಲಿದ್ದು, ಹೂಡಿಕೆಯನ್ನು ಪ್ರೋತ್ಸಾಹಿಸಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್, ಭಾರತದ ಸೇವಾ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಇದು ನಮ್ಮ ಜಿಡಿಪಿಗೆ ಶೇ.೫೦ರಷ್ಟು ಕೊಡಗೆ ನೀಡಲಿದೆ ಎಂದು ಹೇಳಿದ್ದಾರೆ.
ಸೇವಾ ಕ್ಷೇತ್ರವು ಭಾರತವನ್ನು ಕೇಂದರೀಕರಿಸಲಿದ್ದು, ಪ್ರಾದೇಶಿಕ, ದ್ವಿಪಕ್ಷೀಯ ಮತ್ತು ಜಾಗತಿಕ ಮಟ್ಟದ ವ್ಯಾಪಾರಗಳಲ್ಲಿ ಗಮನ ಹರಿಸಲಿದೆ. ಚೀನಾ ಮತ್ತಿತರ ರಾಷ್ಟ್ರಗಳಿಂದ ಆಮದಾಗುತ್ತಿರುವ ಕಳಪೆ ವಸ್ತುಗಳನ್ನು ಪರಿಶೀಲಿಸಲು ಗುಣಮಟ್ಟ ವ್ಯವಸ್ಥೆಯನ್ನು ಸ್ಥಾಪಿಸುತ್ತಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.