ನವದೆಹಲಿ: ಖಾದಿ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್ ಹಾಗೂ ಡೈರಿಗಳ ಮೇಲೆ ಪ್ರಧಾನಿ ಚಿತ್ರ ಪ್ರಕಟಿಸುವ ಕುರಿತು ಮೋದಿಯವರ ಅನುಮತಿಯೇ ಇರಲಿಲ್ಲ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಚರಕ ಹಿಡಿದು ಕುಳಿತ ಮೋದಿ ಅವರ ಚಿತ್ರ ಇತ್ತೀಚೆಗೆ ತೀವ್ರ ವಿವಾದಕ್ಕೆಡೆ ಮಾಡಿದ್ದು, ಕೇಜ್ರಿವಾಲ್ ಹಾಗೂ ರಾಹುಲ್ ಗಾಂಧಿಯವರಿಗಂತೂ ಟೀಕಾಸ್ತ್ರವೇ ಆಗಿತ್ತು.
ಈ ಕುರಿತು ‘ದಿ ಎಕನಾಮಿಕ್ಸ್ ಟೈಮ್ಸ್’ ವರದಿ ಮಾಡಿದ್ದು, ವಿವಾದ ಸಂಬಂಧ ಪ್ರಧಾನಿ ಮೋದಿಯವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆಂದು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಹೇಳಿಕೊಂಡಿದ್ದಾಗಿ ತಿಳಿಸಿದೆ.
ಪ್ರಧಾನಮಂತ್ರಿ ಕಾರ್ಯಾಲಯವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯಕ್ಕೆ ಸೂಚಿಸಿದೆಯಂತೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಪ್ಪಿಗೆ ಪಡೆಯದೇ ಅವರ ಭಾವಚಿತ್ರ ಬಳಸಿರುವುದು ಇದೇ ಮೊದಲೇನಲ್ಲ. ನಿಯಮದ ಪ್ರಕಾರ ಅನುಮತಿಯಿಲ್ಲದೇ ಪ್ರಧಾನಿಗಳ ಹೆಸರು ಅಥವಾ ಫೋಟೊ ಬಳಸಬಾರದು. ಆದರೆ ಈ ಹಿಂದೆ ರಿಲೈಯನ್ಸ್ ಜಿಯೊ, ಪೇಟಿಎಂ ಕೂಡ ಮೋದಿಯವರ ಒಪ್ಪಿಗೆ ಇಲ್ಲದೆಯೇ ಅವರ ಫೋಟೊ ಬಳಸಿದ್ದು ಇಲ್ಲಿ ಉಲ್ಲೇಖನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.