ನವದೆಹಲಿ: ಭಾರತದ ಪಾಸ್ಪೋರ್ಟ್ ಕೇವಲ 46 ವೀಸಾ-ಫ್ರೀ ಅಂಕಗಳೊಂದಿಗೆ ವಿಶ್ವದ ಅತ್ಯಂತ ಪ್ರಬಲ ಪಾಸ್ಪೋರ್ಟ್ಗಳ ಜಾಗತಿಕ ಶ್ರೇಯಾಂಕದಲ್ಲಿ 78ನೇ ಸ್ಥಾನ ಪಡೆದುಕೊಂಡಿದೆ.
ಈ ಪಟ್ಟಿಯಲ್ಲಿ ಪಾಕಿಸ್ಥಾನ 94ನೇ ಸ್ಥಾನ ಪಡೆದಿದೆ.
ವಿಶ್ವದ ಅತ್ಯಂತ ಜನಪ್ರಿಯ ಆರ್ಟನ್ ಕ್ಯಾಪಿಟ್ನ ಜಾಗತಿಕ ಶ್ರೇಯಾಂಕದ ಪಾಸ್ಪೋರ್ಟ್ ಸೂಚ್ಯಂಕ ರಾಷಟ್ರೀಯ ಪಾಸ್ಪೋರ್ಟ್ಗಳ ಗಡಿಯಾಚೆಗಿನ ಪ್ರವೇಶ ಅನುಮತಿಯನ್ನು ಆಧರಿಸಿದೆ. ಒಟ್ಟು 157 ವೀಸಾ- ಫ್ರೀ ಅಂಕಗಳೊಂದಿಗೆ ಜರ್ಮನಿ ಪ್ರಥಮ ಸ್ಥಾನದಲ್ಲಿದೆ.
ವರದಿ ಪ್ರಕಾರ, ಸಿಂಗಾಪುರ 156 ವೀಸಾ-ಫ್ರೀ ಅಂಕಗಳೊಂದಿಗೆ ದ.ಕೋರಿಯಾವನ್ನು ಹಿಂದಿಕ್ಕುವ ಮಲಕ ಏಷ್ಯನ್ ಪಾಸ್ಪೋರ್ಟ್ನ ಅತ್ಯುನ್ನತ ಸ್ಥಾನ ಪಡೆದಿದೆ.
ಚೀನಾ 56ನೇ ಸ್ಥಾನದಲ್ಲಿದ್ದರೆ ಅಫ್ಘಾನಿಸ್ಥಾನ ಕೇವಲ 23 ವೀಸಾ-ಫ್ರೀ ಅಂಕಗಳೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.
ಯಾವುದೇ ದೇಶದ ಪಾಸ್ಪೋರ್ಟ್ ಹೊಂದಿದ ವ್ಯಕ್ತಿ ವೀಸಾ-ಫ್ರೀ ಅಥವಾ ವೀಸಾ ಆನ್ ಅರಿವಲ್ ಮೂಲಕ ಭೇಟಿ ನೀಡಬಹುದಾದ ದೇಶಗಳ ಸಂಖ್ಯೆ ಆಧಾರದಲ್ಲಿ ವೀಸಾ-ಫ್ರೀ ಅಂಕಗಳನ್ನು ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.