ನವದೆಹಲಿ: ಮುಂಬರುವ ಫೆ.1ರಂದು ಆರಂಭಗೊಳ್ಳುವ ಬಜೆಟ್ನಲ್ಲಿ ಭಾರತದ ಸ್ಟಾರ್ಟ್-ಅಪ್ಗಳು ಹೆಚ್ಚಿನ ತೆರಿಗೆ ಲಾಭಗಳನ್ನು ಪಡೆಯುವ ನಿರೀಕ್ಷೆ ಇದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಉದಯೋನ್ಮುಖ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸ್ಟಾರ್ಟ್-ಅಪ್ಗಳಿಗೆ ಪ್ರಸ್ತುತ ನೀಡಲಾಗಿರುವ 3 ವರ್ಷಗಳ ತೆರಿಗೆ ವಿನಾಯಿತಿಯನ್ನು 7 ವರ್ಷಗಳಿಗೆ ಏರಿಕೆ ಮಾಡುವ ಬಗ್ಗೆ ಪರಿಗಣಿಸುವಂತೆ ವಾಣಿಜ್ಯ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಸೂಚಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ತೆರಿಗೆ ಮತ್ತು ತೆರಿಗೆ ಆಧಾರಿತ ವಿಷಯಗಳು ಯಾವಾಗಲೂ ಸ್ಟಾರ್ಟ್-ಅಪ್ಗಳಿಂದಲೇ ಆರಂಭಗೊಳ್ಳುತ್ತದೆ. ಇದು ಸ್ಟಾಟ್-ಅಪ್ಗಳಲ್ಲಿ ನಿಖರ ವ್ಯತ್ಯಾಸಗಳನ್ನು ತರುತ್ತವೆ. ಇದರಲ್ಲಿ ಕೆಲವು ಕಾರ್ಯಗಳು ಆಗಿವೆ, ಹೆಚ್ಚಿನ ಕಾರ್ಯಗಳು ಆಗಬೇಕಿದೆ. ಈ ಬಾರಿಯ ಬಜೆಟ್ ಏನನ್ನು ಆಫರ್ ಮಾಡಲಿದೆ ಎಂದು ಕಾದು ನೋಡಬೇಕಿದೆ ಎಂದು ಅವರಿ ಹೇಳಿದ್ದಾರೆ.
ಸಚಿವಾಲಯ ಉದ್ಯಮಿಗಳ ಎಲ್ಲ ಸಲಹೆಗಳನ್ನು ಸ್ವೀಕರಿಸಿ ಹಣಕಾಸು ಸಚಿವಾಲಯಕ್ಕೆ ಹಸ್ತಾಂತರಿಸಿದೆ.
ತೆರಿಗೆ ಸಂಬಂಧಿತ ಪ್ರಯೋಜನಗಳು ಬಜೆಟ್ ಮೂಲಕವೇ ಬರಬೇಕಿದ್ದು, ಸ್ಟಾರ್ಟ್-ಅಪ್ಗಳಿಗೆ ಸಂಬಂಧಿಸಿದಂತೆ ಮ್ಯಾಟ್ (ಕನಿಷ್ಟ ಪರ್ಯಾಯ ತೆರಿಗೆ)ನಿಂದ ವಿನಾಯಿತಿ ನೀಡುವ ಬಗ್ಗೆಯೂ ಹಣಕಾಸು ಸಚಿವಾಲಯಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.